ರಾಯಚೂರು: ಹಣ ಡಬಲ್ ಆಸೆಗೆ ಆನ್‌ಲೈನ್ ಗೇಮ್ ಆ‌್ಯಪ್‌ಗಳಿಂದ ಯುವಕನೋರ್ವ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ
ನಡೆದಿದೆ.
ಜಿಲ್ಲೆಯ ಲಿಂಗಸುಗೂರು ಮುದಗಲ್ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡ ಯುವಕ. ಅತಿ ಆಸೆಗೆ ಸುಮಾರು 79 ಲಕ್ಷ ರೂ. ಕಳೆದುಕೊಂಡಿದ್ದು, 18 ಎಕರೆ ಜಮೀನು ಸಹ ಮಾರಾಟಮಾಡಿದ್ದಾನೆ. ಕ್ರೈನೈನ್ ಡೇಸ್, ಅಪೆಕ್ಸ್ ನೈನ್, ರಾಧಾ ಎಕ್ಸಚೇಂಜ್, ಬೆಟ್ 365 ಆ‌್ಯಪ್‌ಗಳಲ್ಲಿ ಹಣ ಮಾಯಾವಾಗಿದೆ. ರಮ್ಮಿ, ಕ್ರಿಕೆಟ್, ಕ್ಯಾಸಿನೋ ಸೇರಿ ಇತರೆ ಆಟಗಳಿಗೆ ದುಡ್ಡು ಕಟ್ಟಿ ದಿವಾಳಿಯಾಗಿದ್ದು. ಆನ್‌ಲೈನ್ ಆ‌್ಯಪ್‌ಗಳು ಹಾಗೂ ಅವುಗಳ ಡೀಲರ್‌ಗಳಿಂದ ವಂಚನೆ ಆರೋಪಿಸಿದ್ದಾರೆ
ಸ್ನೇಹಿತ ಆ‌್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ, ಹನುಮನಗೌಡ ಎಂಬುವವರಿಂದ ವಂಚನೆ ಆರೋಪ ಮಾಡಿದ್ದು, ಹಣ ಪಡೆದು ಲಾಗಿನ್ ಐಡಿ, ಪಾಸ್‌ವರ್ಡ್ ಕೊಡುತ್ತಿದ್ದ ಡೀಲರ್‌ಗಳು ಹಣ ದುಪ್ಪಟ್ಟು ಮಾಡಿಕೊಡುವ ಆಸೆ ತೋರಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
2014 ರಿಂದ ಇಲ್ಲಿವರೆಗೆ ಆನ್‌ಲೈನ್ ಗೇಮ್ ಗಳ ಮೇಲೆ ಲಕ್ಷಾಂತರ ರೂಪಾಯಿ ಸುರಿದ ಯುವಕ ನ್ಯಾಯಕ್ಕಾಗಿ ರಾಯಚೂರು ಎಸ್.ಪಿ ಗೆ ದೂರು ಸಲ್ಲಿಸಿದ್ದಾರೆ.