ಆಡನ್ನು ತಿಂದು ಮರಕ್ಕೆ ನೇತು ಹಾಕಿದ ಚಿರತೆ

0
10

ಮಂಗಳೂರು: ದಕ್ಷಿಣ ಕನ್ನಡದ ಕಡಬ ತಾಲೂಕಿನಲ್ಲಿ ಕಾಡಾನೆ ಸಂಕಷ್ಟದ ಜೊತೆಗೆ ಇದೀಗ ಚಿರತೆ ಹಾವಳಿ ಹೆಚ್ಚಾಗಿದೆ, ಮರದ ಮೇಲೆ ಚಿರತೆ ತಿಂದ ಆಡಿನ ಕಳೆಬರಹ ಪತ್ತೆ ಆಗಿದೆ, ಕಡಬದ ಬೆತ್ತೋಡಿ ಎಂಬಲ್ಲಿ ರಬ್ಬರ್ ತೋಟದ ಮರದ ಮೇಲೆ ಆಡಿನ ಅರ್ಧ ತಿಂದ ಕಳೆಬರಹ ಪತ್ತೆ ಆಗಿದ್ದು ಮೇಯಲು ಬಿಟ್ಟಿದ್ದ ಆಡನ್ನು ಬೇಟೆಯಾಡಿ ಮರಕ್ಕೆ ಎಳೆದೊಯ್ದು ಚಿರತೆ ತಿಂದಿದೆ. ಇತ್ತಿಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಕು ನಾಯಿಯನ್ನು ಚಿರತೆ ಹಾವಳಿಯಾಗಿತ್ತು, ಕಾಡಾನೆ ಹಾವಳಿಯ ಬಳಿಕ ಸ್ಥಳೀಯರಿಗೆ ಚಿರತೆ ದಾಳಿ ಭೀತಿಯಿಂದ ಕಂಗೆಟ್ಟಿದ್ದಾರೆ ಕಾಡಾನೆ ಮತ್ತು ಚಿರತೆ ಹಾವಳಿಯಿಂದ ರಕ್ಷಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Previous articleಸಿಸಿಬಿ ಪೊಲೀಸರ ದಾಳಿ: ಐದು ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ಪತ್ತೆ; ಐವರ ಬಂಧನ
Next articleಪೊಲೀಸ್ ಠಾಣೆ ಎದುರು ಕೆಜಿಎಫ್ ಶಾಸಕಿ ಪ್ರತಿಭಟನೆ