Home Advertisement
Home ತಾಜಾ ಸುದ್ದಿ ಆ ರೀತಿ ಮಾತಾಡೋದು ಅವರಿಗೆ ಶೋಭೆ ತರಲ್ಲ…

ಆ ರೀತಿ ಮಾತಾಡೋದು ಅವರಿಗೆ ಶೋಭೆ ತರಲ್ಲ…

0
120

ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ, ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ

ಬೆಂಗಳೂರು: ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಸಂಸದ ಸುಧಾಕರ್​ ವಿಜಯೇಂದ್ರ ವಿರುದ್ದ ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿ ‘ಸುಧಾಕರ್ ಅವರ ಆಕ್ರೋಶದ ಮಾತು ನೋಡಿದೆ, ಇನ್ನು ಮುಂದೆ ದಯವಿಟ್ಟು ಆ ರೀತಿಯಾಗಿ ಮಾತನಾಡಬೇಡಿ. ಹಾಗೆ ಮಾತನಾಡಿದರೆ ಅವರಿಗೂ ಗೌರವ ಅಲ್ಲ, ಪಕ್ಷಕ್ಕೂ ಗೌರವ ಸಿಗಲ್ಲ. ಸುಧಾಕರ್​ ಆ ರೀತಿಯಾಗಿ ಮಾತನಾಡಬಾರದು. ನಾನು ಅವರಿಗೆ ಆಗ್ರಹ ಮಾಡಲ್ಲ, ಮನವಿ ಮಾಡ್ತೇನೆ. ನಾನು ಸುಧಾಕರ್ ಅವರನ್ನೂ ಭೇಟಿ ಮಾಡ್ತೇನೆ, ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ, ಸುಧಾಕರ್ ಅನ್ಯಥಾ ಭಾವಿಸಬಾರದು, ತಪ್ಪು ತಿಳ್ಕೋಬಾರದು ಅಧ್ಯಕ್ಷ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ, ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚುನಾವಣಾಧಿಕಾರಿ ಆಗಿದ್ರು, 13 ಜನ ವೀಕ್ಷಕರು ಇದ್ರು, ಇವ್ರು ಜಿಲ್ಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆಗೆ ತಲಾ ಮೂರು ಹೆಸರು ಹೈಕಮಾಂಡ್‌ಗೆ ಕಳಿಸಿಕೊಟ್ಟಿದ್ರು, ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ ಎಂದರು. ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡುವ ಅಧಿಕಾರ ನನಗೆ ಇಲ್ಲ. ಸುಧಾಕರ್ ಅವರಿಗೆ ಇದನ್ನು ಹೇಳಲು ಇಷ್ಟಪಡ್ತೇನೆ. ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ, ಸುಧಾಕರ್ ಅವರು ಹಿರಿಯರು ಹೀಗೆಲ್ಲ ಮಾತಾಡಬಾರದು ಎಂದರು.

Previous articleಮಹಾಕುಂಭಮೇಳದಲ್ಲಿ ಕಾಲ್ತುಳಿತ: ನಾಲ್ವರ ಮೃತದೇಹ ಇಂದು ಸಂಜೆ ಬೆಳಗಾವಿಗೆ
Next articleಮಹಾಕುಂಭಮೇಳದಲ್ಲಿ ರಾಜ್‌ ಬಿ ಶೆಟ್ಟಿ