ಅಸಭ್ಯ ವರ್ತನೆ: ಮುಖ್ಯಶಿಕ್ಷಕನಿಗೆ ಥಳಿಸಿದ ವಿದ್ಯಾರ್ಥಿನಿಯರು

0
16

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಠಾಣಾ ವ್ಯಾಪ್ತಿಯ ಕಟ್ಟೇರಿ ಗ್ರಾಮದಲ್ಲಿನ ವಸತಿ ನಿಲಯದಲ್ಲಿ ಮುಖ್ಯಶಿಕ್ಷಕನಿಗೆ ವಿದ್ಯಾರ್ಥಿನಿಯರು ದೊಣ್ಣೆಯಿಂದ ಥಳಿಸಿದ್ದಾರೆ.
ಚಿನ್ಮಯಾನಂದ ಥಳಿತಕ್ಕೊಳಾದ ಮುಖ್ಯಶಿಕ್ಷಕ. ಈತ ತಡರಾತ್ರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ತಕ್ಷಣವೇ ಎಚ್ಚೆತ್ತ ವಿದ್ಯಾರ್ಥಿನಿಯರು ಸಹಪಾಠಿಗಳಿಗೆ ಮಾಹಿತಿ ನೀಡಿದ ನಂತರ ಕೈಯಲ್ಲಿ ಕೋಲು, ದೊಣ್ಣೆ ಹಿಡಿದು ಕಾಮುಕ ಶಿಕ್ಷನ ಮೇಲೆ ದಾಳಿ ನಡೆಸಿದ್ದಾರೆ.
ಕೆ.ಆರ್.ಎಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleಯಲ್ಲಮ್ಮದೇವಿ ಸನ್ನಿಧಿಯಲ್ಲಿ ಗೋಡ್ಖಿಂಡಿ ಕೊಳಲು ನಿನಾದ
Next articleಸರ್ಕಾರಿ ಚಾಲಕನಿಗೆ ಅಮಲು ತಂದ ಆಪತ್ತು..