Home Advertisement
Home ತಾಜಾ ಸುದ್ದಿ ಅಶೋಕ್ ಹಾರನಹಳ್ಳಿ ಅವರಿಗೆ ಶಂಕರ ಅನುಗ್ರಹ ಪುರಸ್ಕಾರ

ಅಶೋಕ್ ಹಾರನಹಳ್ಳಿ ಅವರಿಗೆ ಶಂಕರ ಅನುಗ್ರಹ ಪುರಸ್ಕಾರ

0
147

ಹೊಸಪೇಟೆ: ನಗರಕ್ಕೆ ಸೋಮವಾರ ಆಗಮಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರನ್ನು ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆ ನೀಡುವ ರಾಜ್ಯಮಟ್ಟದ ಆದಿ ಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ-೨೦೨೪ ನೀಡಿ ಗೌರವಿಸಲಾಯಿತು.
ನಗರದ ಹೊಸಪೇಟೆ ತಾಲೂಕು ಬ್ರಾಹ್ಮಣರ ಸಂಘದ ಪದಾಧಿಕಾರಿಗಳು ಸಹ ನಗರದ ಗಾಯಿತ್ರೀ ದೇವಸ್ಥಾನದಲ್ಲಿ ಅಶೋಕ್ ಹಾರನಹಳ್ಳಿ ಅವರನ್ನು ಸನ್ಮಾನಿಸಿದರು. ಬ್ರಾಹ್ಮಣ ಸಮಾಜದ ಮುಖಂಡರಾದ ಕೆ.ಹನುಮಂತರಾವ್, ಶೀನಂ ಭಟ್ಟರು, ದಿವಾಕರ್, ರಮೇಶ್ ಪುರೋಹಿತ, ಅನಿಲ್ ಜೋಷಿ, ಗೋವಿಂದರಾವ್, ಗುರುರಾಜ ಶಿಗ್ಗಾವಿ, ವೇಣುಗೋಪಾಲ ವೈದ್ಯ, ಶ್ರೀಪಾದ, ಗೊವೀಂದ ಕುಲಕರ್ಣಿ, ನರಸಿಂಹಮೂರ್ತಿ ಅಪ್ಪಣ್ಣ ಸೇರಿದಂತೆ ಇತರ ಸಮಾಜದ ಮುಖಂಡರು ಇದ್ದರು.