ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದ ಮನಮೋಹನ ಸಿಂಗ್

0
29

ಬೆಳಗಾವಿ: ಮಾಜಿ ಪ್ರಧಾನಿ, ವಿಶ್ವದ ಸರ್ವಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಕಂಬನಿ ಮಿಡಿದಿದ್ದಾರೆ.
ಭಾರತದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಶ್ರೇಯಸ್ಸು ಡಾ. ಮನಮೋಹನ್ ಸಿಂಗ್ ಅವರದು. ಒಂದು ದಶಕಗಳ ಕಾಲ ಭಾರತಕ್ಕೆ ಸ್ಥಿರ ಆಡಳಿತ ನೀಡಿದ ಹೆಗ್ಗಳಿಕೆಯೂ ಅವರಿಗೇ ಸಲ್ಲುತ್ತದೆ ಎಂದು ಲಾಡ್‌ ಅವರು ತಿಳಿಸಿದ್ದಾರೆ.
ಸಿಂಗ್‌ ಅವರ ನಿಧನದಿಂದ ಭಾರತ ಒಬ್ಬ ಶ್ರೇಷ್ಠ ಮುತ್ಸದ್ಧಿಯನ್ನು ಕಳೆದುಕೊಂಡಿದೆ. ಭಾರತ ಮಾತೆಯ ಹೆಮ್ಮೆಯ ಪುತ್ರ ಡಾ. ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು ಎಂದು ಹೇಳಿದ್ದಾರೆ.

Previous articleದೇಶದ ಸರ್ವಾಂಗೀಣ ಅಭ್ಯುದಯಕ್ಕೆ ಶ್ರಮಿಸಿದ್ದ ಶ್ರೇಷ್ಠ ರಾಜನೀತಿ ತಜ್ಞ
Next articleಸರಳ ಸಜ್ಜನಿಕೆ ರಾಜಕಾರಣಿ