ಅಯ್ಯಪ್ಪ ಪ್ರಸಾದದಲ್ಲಿ ಅಧಿಕ ಕೀಟನಾಶಕ

0
33

ತಿರುವನಂತಪುರಂ: ಶಬರಿಮಲೈನಲ್ಲಿ ಪ್ರಸಾದವಾಗಿ ಬಳಸಲಾಗುವ ಏಲಕ್ಕಿಯಲ್ಲಿ ಪಾಯಸದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಕಂಡು ಬಂದಿದ್ದು, ಒಂದು ವರ್ಷದಲ್ಲಿ ೬.೬೫ ಲಕ್ಷ ಕಂಟೈನರ್ `ಅರವಣ’ವನ್ನು ಉಪಯೋಗಿಸದೇ ಇರಲು ಟ್ರಾವಂಕೂರ್ ದೇವಸ್ವಂ ಮಂಡಳಿ(ಟಿಡಿಬಿ) ನಿರ್ಧರಿಸಿದೆ. ತಿರುಪತಿ ಪ್ರಸಾದದಲ್ಲಿ ಪ್ರಾಣಿ ಗಳು ಕೊಬ್ಬು ಇರುವ ವಿಚಾರ ಆಸ್ಥಿರ ಮನಸ್ಸಿಗೆ ಆಘಾತ ಉಂಟು ಮಾಡಿರುವ ಸಂದರ್ಭದಲ್ಲೇ ಶಬರಿಮಲೈ ಪ್ರಸಾದವೂ ಕಳಪೆ ಗುಣಮಟ್ಟ ಹೊಂದಿವೆ ಎನ್ನುವ ಅಂಶ ಬಯಲಾಗಿದೆ. ಇಷ್ಟು ಭಾರಿ ಪ್ರಮಾಣದ ಅರವಣವನ್ನು ಹೈದರಾಬಾದ್ ಮೂಲದ ಸಂಸ್ಥೆಯೊಂದು ತೆಗೆದುಕೊಂಡು ಹೋಗಿ, ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಲಿದೆ.

Previous articleಬೆಂಕಿ: ಒಂದೇ ಕುಟುಂಬದ 7ಜನ ಬಲಿ
Next articleವಿವಾದ ಬದಿಗಿಟ್ಟು ಒಂದಾಗಿ: ಆರೆಸ್ಸೆಸ್ ಕರೆ