ಅಯೋಧ್ಯೆ: ರಾಮ ಮಂದಿರವನ್ನು ಗುರಿಯಾಗಿಸಿಕೊಂಡು ಇಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಬಂದಿದೆ.
ಸೋಮವಾರ ತಡರಾತ್ರಿ ರಾಮ ಜನ್ಮಭೂಮಿ ಟ್ರಸ್ಟ್‌ಗೆ ಬಂದ ಈ ಬೆದರಿಕೆ ಇಮೇಲ್ ಬಂದಿದ್ದು, ದೇವಾಲಯದ ಭದ್ರತೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಬೆದರಿಕೆ ಪತ್ರ ಬಂದ ನಂತರ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಯೋಧ್ಯೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೈಬರ್ ಸೆಲ್ ಬೆದರಿಕೆಯ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಗಳಲ್ಲಿ ಇಮೇಲ್‌ಗಳು ತಮಿಳುನಾಡಿನಿಂದ ಬಂದಿರಬಹುದು ಎಂದು ತಿಳಿದುಬಂದಿರುವುದರಿಂದ, ಸೈಬರ್ ಸೆಲ್ ಅವುಗಳ ಮೂಲವನ್ನು ಪತ್ತೆಹಚ್ಚಲು ಮತ್ತು ಬೆದರಿಕೆಗಳಿಗೆ ಕಾರಣರಾದವರನ್ನು ಗುರುತಿಸಲು ಪ್ರಯತ್ನಗಳನ್ನು ತೀವ್ರಗೊಳಿಸಿದೆ.