ಅಮ್ರಿತಾ ವಿಜಯ್ ಟಾಟ ಮುಡಿಗೆ ಮಿಸೆಸ್ ಇಂಡಿಯಾ-2025 ಕಿರೀಟ

0
53

ಪೂನಾದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಮಿಸೆಸ್ ಇಂಡಿಯಾ-2025 ಕಿರೀಟ ಕರ್ನಾಟಕದ ಪಾಲಾಗಿದೆ. ಬೆಂಗಳೂರಿನ ಅಮ್ರಿತಾ ವಿಜಯ್ ಟಾಟ 2025ರ ಸಾಲಿನ ಮಿಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಅಮ್ರಿತಾ, ಅಂತಿಮ ಸುತ್ತಿನಲ್ಲಿದ್ದ 53 ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನ ಫಾರ್ಚ್ಯೂನ್ ವ್ಯಾಲಿ ನಿವಾಸಿಯಾಗಿರುವ ಅಮ್ರಿತಾ ವಿಜಯ್ ಟಾಟ, ಅನೇಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅನ್ನದಾನ ಹೆಸರಲ್ಲಿ ಪ್ರತಿನಿತ್ಯ ಸಾವಿರಾರು ಜನರಿಗೆ ಉಚಿತ ಆಹಾರ ನೀಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾರಂಗಕ್ಕೂ ಕಾಲಿಡಲಿದ್ದಾರೆ.

Previous articleನವಲಗುಂದ: ಹೃದಯಾಘಾತದಿಂದ ವ್ಯಕ್ತಿ ಸಾವು
Next articleBMTC: ಬಿಎಂಟಿಸಿಯ ಎರಡು ಹೊಸ ಮಾರ್ಗ, ನಾನ್‌ ಎಸಿ ಬಸ್ ವೇಳಾಪಟ್ಟಿ