ಅಮೆರಿಕನ್ನರನ್ನು ಸೆಳೆದ ಕರುನಾಡಿನ ಯಕ್ಷಗಾನ

0
18

ಶಿರಸಿ: ಕರುನಾಡಿನ ಕಲೆ ಯಕ್ಷಗಾನ ಅಮೆರಿಕದಲ್ಲಿ ಜನತೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಲಾವಿದೆ ಸುಮಾ ಹೆಗಡೆ ಗಡಿಗೆಹೊಳೆ ಅವರ ನೇತೃತ್ವದಲ್ಲಿ ಅಮೆರಿಕದ ನಿವಾಸಿಗಳಿಗೇ ತರಬೇತಿ ನೀಡಿ, ಅವರಿಂದಲೇ ಯಕ್ಷಗಾನ ಪ್ರದರ್ಶನ ನೀಡಿದ್ದು ವಿಶೇಷವೆನಿಸಿತು.
ಏ. 30ರಂದು ಕ್ಯಾಲಿಪೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ನಡೆಯಿತು. ಅಲ್ಲಿಯ ನಿವಾಸಿಗಳಿಗೆ ಯಕ್ಷಗಾನವನ್ನು ಆನ್‌ಲೈನ್ ಮೂಲಕ ಮತ್ತು ಬಳಿಕ ಅಲ್ಲಿಗೇ ತೆರಳಿ ಸುಮಾ ಹೆಗಡೆ ತರಬೇತಿ ನೀಡಿದ್ದರು. ಕನ್ನಡ ಕೂಟದ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಪ್ರಮುಖ ಆಕರ್ಷಣೆಯಾಗಿತ್ತು. ಬಳಿಕ ಮೇ 7ರಂದು ರಾವಣಾವಸಾನ ಯಕ್ಷಗಾನ ಪ್ರದರ್ಶನ ನಡೆಯಿತು. ಕನ್ನಡ ನಾಡಿನ ಕಲೆಯನ್ನು ಅಲ್ಲಿಯ ನಿವಾಸಿಗಳು ಸಂತಸದಿಂದ ಪ್ರೋತ್ಸಾಹಿಸಿದರು.

Previous articleಪಕ್ಷೇತರನಿಗೆ ಕಾಂಗ್ರೆಸ್ ಗಾಳ..!?
Next articleಹುಬ್ಬಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಚಾಕು ಇರಿತ