ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷಕನಿಗೆ ಜಾಮೀನು

0
30

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವೀರಕಂಭ ವ್ಯಾಪ್ತಿಯ ಶಾಲೆಯ ಶಿಕ್ಷಕನಿಗೆ ಮಂಗಳೂರಿನ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿದ್ಯಾರ್ಥಿಗಳ ಪೋಷಕರು ನೀಡಿದ ದೂರುಗಳ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಏಳು ದೂರುಗಳು ದಾಖಲಾಗಿದ್ದವು. ಆ ಎಲ್ಲ ಏಳು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಶಿಕ್ಷಕ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಹಾಗೂ ಎಫ್.ಟಿ.ಎಸ್.ಸಿ (ಪೋಕ್ಸೋ) ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿ ಶಿಕ್ಷಕನ ಪರವಾಗಿ ನ್ಯಾಯವಾದಿಗಳಾದ ಮನೋಹರ ಪಿ. ವಿಟ್ಲ, ಚಿದಾನಂದ ಕೆ. ಹಾಗೂ ಮಹೇಶ್ ಅಳಿಕೆ ವಾದಿಸಿದ್ದರು.

Previous articleಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ
Next articleಕರ್ಕೇಶ್ವರದಲ್ಲಿ ಕೆಎಫ್‌ಡಿ ಪತ್ತೆ