ಮಂಗಳೂರು: ನಗರದ ನಂತೂರಿನ ಅಪಾರ್ಟ್‌ಮೆಂಟ್‌ನಿಂದ ಎಸಿ ಟೆಕ್ನಿಶಿಯನ್ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ವಿನಯ್ ಜೋಯೆಲ್ ತಾವ್ರೋ(22) ಮೃತಪಟ್ಟವರು. ಇವರು ಬುಧವಾರ ಸಂಜೆ ಸುಮಾರು 5.58ರ ಸುಮಾರಿಗೆ ನಂತೂರು ಬಳಿಯಿರುವ ಮೌಂಟ್ ಟೀಯರಾ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಲ್ಲಿ ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು, ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಈ ಕುರಿತು ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.