ಅಪಘಾತ: ಕೇರಳ ಮೂಲದ ಇಬ್ಬರು ಸಾವು

0
7

ದಾವಣಗೆರೆ : ಜಾಲಿ ರೈಡ್‌ಗೆ ಹೊರಟ್ಟಿದ್ದ ಕೇರಳ ಮೂಲದ ಇಬ್ಬರು ಯುವಕರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೇರಳ ಮೂಲದ ಅತುಲ್(೨೫), ಋಷಿಕೇಶ್ ( ೨೪) ಸಾವನ್ನಪ್ಪಿದ ಯುವಕರು. ಈ ಯುವಕರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಜಾಲಿ ರೈಡ್‌ನಲ್ಲಿ ಹೊರಟಿದ್ದರು. ನಗರದ ಎಸ್.ಎಸ್. ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದೆ.
ಎನ್‌ಫಿಲ್ಡ್ ಇಮಾಲಯನ್ ಬೈಕ್‌ನಲ್ಲಿ ಜಾಲಿ ರೈಡ್ ಗೆ ಬಂದಿದ್ದ ಯುವಕರು ಬೈಕ್ ಚಾಲನೆ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಪರಿಣಾಮ ಬ್ರಿಡ್ಜ್ ಮೇಲಿಂದ ರೈಲ್ವೆ ಹಳಿ ಪಕ್ಕದಲ್ಲಿ ಬಿದ್ದು ಯುವಕರು ಸ್ಥಳದಲ್ಲೇ ಸಾವನನಪ್ಪಿದ್ದಾರೆ.
ಇದೇ ವೇಳೆ ರಸ್ತೆಯ ಮಧ್ಯೆದಲ್ಲಿ ಬಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರು ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾದೆ.ಸ್ಥಳಕ್ಕೆ ಎಸ್ ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
Next articleಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ