ದೆಹಲಿ: ಲೋಕಸಭೆಯಿಂದ ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅದಾನಿ ಪರವಾಗಿ ನಿಯಮಗಳನ್ನು ಬದಲಾಯಿಸಲಾಗಿದೆ, ಪ್ರಧಾನಿ-ಅದಾನಿ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಹೆದರುವುದಿಲ್ಲ, “ಅನರ್ಹತೆಯ ಮೂಲಕ ನನ್ನ ಬಾಯಿ ಮುಚ್ಚಲು ಸಾಧ್ಯವಿಲ್ಲ, ನಾನು ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಎಂದಿಗೂ ಭಾರತದ ವಿರುದ್ಧ ಮಾತನಾಡಿಲ್ಲ ಎಂದು ಹೇಳಿದರು. ಸತ್ಯ ಮಾತನಾಡುವುದು ಅಸಮಂಜಸವಲ್ಲ, ನನಗೆ ಜೈಲಿಗೆ ಹೋಗುವ ಭಯವಿಲ್ಲ” ಅವರು ನನ್ನನ್ನು ಅನರ್ಹಗೊಳಿಸಬಹುದು ಆದರೆ ನನ್ನ ಕೆಲಸವನ್ನು ಅಲ್ಲ, ಅದಾನಿ ಶೆಲ್ ಕಂಪನಿಗಳಿಗೆ 20,000 ಕೋಟಿ ರುಪಾಯಿ ಕೊಟ್ಟಿದ್ದು ಯಾರದ್ದು ಎಂಬ ಸರಳ ಪ್ರಶ್ನೆಯಿಂದ ಪ್ರಧಾನಿಯನ್ನು ರಕ್ಷಿಸಲು ನಡೆಸಲಾದ ಸಂಪೂರ್ಣ ನಾಟಕ ಇದು. ಈ ಬೆದರಿಕೆ, ಅನರ್ಹತೆ ಅಥವಾ ಜೈಲು ಶಿಕ್ಷೆಗೆ ನಾನು ಹೆದರುವುದಿಲ್ಲ ಎಂದರು.