ಕುಷ್ಟಗಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆ.ಪಿಪಿಸಿ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಮಾತಿನ ಸಮರದ ಪ್ರಶ್ನೆಗಳಿಗೆ ನಾನು ಏನು ಹೇಳುವುದಿಲ್ಲ ರಮೇಶ ಜಾರಕಿಹೊಳಿ ಅವರ ಸೋದರ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಅದೇ ನನ್ನ ಉತ್ತರವಾಗಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದವರು ರಮೇಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮನೆತನದವರು ದೊಡ್ಡವರಿದ್ದೀರಿ ಅದನ್ನು ಬೆಳೆಸುವುದು ಬೇಡ ಎಂದು ಬಾಲಚಂದ್ರ ಚಿಕ್ಕವರಾದರೂ ಸಹ ದೊಡ್ಡ ಮಾತು ಹೇಳಿದ್ದಾರೆ ಅದನ್ನು ನಾನು ಗೌರವಿಸುತ್ತೇನೆ ಎಂದರು.
ಅಭಿವೃದ್ಧಿ ಮಾಡಿ ತೋರಿಸುತ್ತೇನೆ: ರಾಜ್ಯ ಮತ್ತು ರಾಷ್ಟ್ರಮಟ್ಟದ ಅಭಿವೃದ್ಧಿ ವಿಚಾರಕ್ಕೆ ನಾನು ಹೋಗುವುದಿಲ್ಲ ನನ್ನ ಕ್ಷೇತ್ರದಲ್ಲಿ ನಾನು ಕೆರೆ ತುಂಬಿಸುವ ಯೋಜನೆ, 100 ಹಾಸಿಗೆ ಆಸ್ಪತ್ರೆ ಮಂಜೂರು, ಕೊಪ್ಪಳ ಲಿಸ್ಟ್ ಇರಿಗೇಶನ್ ಯೋಜನೆ, ವಸತಿ ನಿಲಯಗಳ ಕಟ್ಟಡ, ಸಿಟಿ ಸ್ಕ್ಯಾನಿಂಗ್ ಉದ್ಘಾಟನೆ ಮಾಡಿದ್ದೇನೆ 9 ಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡಿದ್ದೇನೆ. ನಾನು ಯಾರ ಮಾತಿಗೂ ಕೂಡ ಪ್ರತಿ ಉತ್ತರ ನೀಡುವುದಿಲ್ಲ ನಾನು ಏನಿದ್ದರೂ ಕೂಡ ಕೆಲಸ ಮಾಡಿ ತೋರಿಸುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಸಿಂಗಲ್ ಆದೇಶ: ಕಳೆದ 2013 ರಲ್ಲಿ ಸರ್ಕಾರದ ಆರ್ಥಿಕ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದ 27 ವಸತಿ ಶಾಲೆಗಳನ್ನು ತಡೆ ಹಿಡಿಯಲಾಗಿತ್ತು. ಇದರಲ್ಲಿ ಹನುಮನಾಳ ಬಿಸಿಎಂ ಕಿತ್ತೂರು ರಾಣಿ ಚನ್ನಮ್ಮ ಒಂದು ಈ ಬಗ್ಗೆ ಕಳೆದ ಬೆಳಗಾವಿ ಸುವರ್ಣ ಅಧಿವೇಶನದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಪ್ರಸ್ತಾಪಿಸಿದಾಗ ಸಿಂಗಲ್ ಆದೇಶವಾಗಿ ಅಧಿಕೃತ ಮಂಜೂರಿ ಇದಾಗಿದೆ. ಮುಂದಿನ ಜೂನ್ ತಿಂಗಳಿನಿಂದ ವಸತಿ ಶಾಲೆ ಆರಂಭಿಸಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹನುಮನಾಳ ಶಾಲೆಯ ಪಕ್ಕದಲ್ಲಿ 7 ಎಕರೆ ಖಾಸಗಿ ಜಮೀನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.
ಅಧಿಕಾರಿಗಳೇ ಆಡಳಿತ ಮಾಡುತ್ತಾರೆ: ರಾಷ್ಟ್ರ ಮತ್ತು ರಾಜ್ಯ ಮುನ್ನಡೆಸಿಕೊಂಡು ಹೊರಟಿರುವುದು ಐಎಎಸ್,ಕೆಎಎಸ್ ಅಧಿಕಾರಿಗಳು ಸೂತ್ರದಾರರಾಗಿದ್ದಾರೆ. ಜನಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ಒಳಯ ಹೆಸರು,ಕೆಟ್ಟ ಹೆಸರು ತರುವವರು ಅಧಿಕಾರಿಗಳಾಗಿದ್ದಾರೆ. ಏನಾದರೂ ಸಣ್ಣ ಪುಟ್ಟ ನೂನೆತೆಗಳು ಕಂಡುಬಂದರೆ ಸರ್ಕಾರಕ್ಕೆ ಬೈಯುತ್ತೇವೆ, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ ಆದರೆ ನೂನ್ಯತೆ ಆಗಿರುವುದು ಕೆಳಮಟ್ಟದ ಅಧಿಕಾರಿಗಳಿಂದ ಮಾತ್ರ ಆಗಿರುತ್ತದೆ. ಹೀಗಾಗಿ ಕೆಳಮಟ್ಟದ ಅಧಿಕಾರಿಗಳು ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂದರು