ಅದ್ಭುತ ಬುದ್ಧಿಮತ್ತೆಯ ಸ್ಮಾರ್ಟ್ ಫೋನ್ ಬಿಡುಗಡೆ

ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ ಸಂಗ್ ಇಂದು ಅದ್ಭುತ ಬುದ್ಧಿಮತ್ತೆಯುಳ್ಳ ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್ ಗಳು ಅದ್ಭುತವಾದ ಸರ್ಚ್ ಮತ್ತು ವಿಶುವಲ್ ಅನುಭವವನ್ನು ಒದಗಿಸಲಿದ್ದು, ಸೃಜನಶೀಲತೆಗೆ ಮತ್ತಷ್ಟು ಇಂಬು ಕೊಡಲಿವೆ. ಹೊಸ ವಿನ್ಯಾಸ ಭಾಷೆಯನ್ನು ಹೊಂದಿರುವ ಈ ಹೊಸ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ ಫೋನ್‌ ಗಳು ಹೆಚ್ಚು ಬಾಳಿಕೆ ಬರಲಿದೆ ಮತ್ತು ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಜೊತೆಗೆ ದೃಢವಾದ ಭದ್ರತೆ ಮತ್ತು ಪ್ರೈವೆಸಿ ಸುರಕ್ಷತೆ ಒದಗಿಸುತ್ತವೆ.

ಅದ್ಭುತ ಬುದ್ಧಿಮತ್ತೆ: ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಸ್ಮಾರ್ಟ್ ಫೋನ್ ಗಳು ಅದ್ಭುತ ಬುದ್ಧಿಮತ್ತೆ ಹೊಂದಿದ್ದು, ಭಾರತೀಯ ಗ್ರಾಹಕರಿಗಾಗಿ ಎಐ ಸೌಕರ್ಯವನ್ನು ಒದಗಿಸುತ್ತದೆ. ಅದ್ಭುತ ಬುದ್ಧಿಮತ್ತೆ (ಆಸಮ್ ಇಂಟೆಲಿಜೆನ್ಸ್), ಒಂದು ಸಮಗ್ರ ಮೊಬೈಲ್ ಎಐ ಸೂಟ್ ಆಗಿದ್ದು, ಗ್ಯಾಲಕ್ಸಿ ಅಭಿಮಾನಿಗಳ ಪ್ರೀತಿಯ ಎಐ ಫೀಚರ್ ಗಳು ಸೇರಿದಂತೆ ಅತ್ಯಾಧುನಿಕ ಎಐ ಫೀಚರ್ ಗಳನ್ನು ಒದಗಿಸುತ್ತದೆ. ಗೂಗಲ್‌ ನ ಸರ್ಕಲ್ ಟು ಸರ್ಚ್ ಫೋನ್‌ ಫೀಚರ್ ಸರ್ಚ್ ಮಾಡಲು ಬಹಳ ಸುಲಭ ಮಾರ್ಗವನ್ನು ಒದಗಿಸುತ್ತದೆ. ಸರ್ಕಲ್ ಟು ಸರ್ಚ್‌ ನ ಹೊಸ ಅಪ್ ಡೇಟ್ ಗಳಿಂದ ಬಳಕೆದಾರರು ಆಪ್‌ ಗಳನ್ನು ಬದಲಾಯಿಸದೆಯೇ ಅವರು ಕೇಳುತ್ತಿರವ ಹಾಡುಗಳನ್ನು ತಕ್ಷಣವೇ ಸರ್ಚ್ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೇಳುವ ಹಾಡಾಗಲೀ ಅಥವಾ ಸಮೀಪದ ಯಾವುದೋ ಸ್ಪೀಕರ್‌ ಗಳಿಂದ ಬರುವ ಸಂಗೀತವಾಗಲಿ, ನ್ಯಾವಿಗೇಷನ್ ಬಾರ್ ಅನ್ನು ದೀರ್ಘಕಾಲ ಒತ್ತಿ ಹಿಡಿದುಕೊಂಡು ಸರ್ಕಲ್ ಟು ಸರ್ಚ್ ಫೀಚರ್ ಅನ್ನು ಸಕ್ರಿಯಗೊಳಿಸಿ, ನಂತರ ಮ್ಯೂಸಿಕ್ ಬಟನ್ ಒತ್ತುವ ಮೂಲಕ ಹಾಡಿನ ಹೆಸರು ಮತ್ತು ಕಲಾವಿದರ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅದ್ಭುತ ಬುದ್ಧಿಮತ್ತೆ ವಿಭಾಗದಲ್ಲಿ ಆಟೋ ಟ್ರಿಮ್, ಬೆಸ್ಟ್ ಫೇಸ್, ಇನ್‌ ಸ್ಟಂಟ್ ಸ್ಲೋ-ಮೋ ಮುಂತಾದ ವಿಶುವಲ್ ಎಡಿಟಿಂಗ್ ಫೀಚರ್ ಗಳ ಶ್ರೇಣಿಯನ್ನು ಸಹ ನೀಡಲಾಗಿದೆ. ಆಟೋ-ಟ್ರಿಮ್ ಮತ್ತು ಬೆಸ್ಟ್ ಫೇಸ್ ಎಂಬುದು ಉನ್ನತ ಮಟ್ಟದ ಎಐ ವೈಶಿಷ್ಟ್ಯಗಳಾಗಿದ್ದು, ಇವೀಗ ಗ್ಯಾಲಕ್ಸಿ ಎ56 5ಜಿಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೊಸ ಸ್ಮಾರ್ಟ್‌ ಫೋನ್‌ ಗಳು ಆಬ್ಜೆಕ್ಟ್ ಎರೇಸರ್‌ ಫೀಚರ್ ಅನ್ನು ಹೊಂದಿದ್ದು, ಈ ಫೀಚರ್ ಬಳಕೆದಾರರಿಗೆ ಫೋಟೋಗಳ ಅನಗತ್ಯ ಭಾಗಗಳನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಫಿಲ್ಟರ್‌ ಗಳು ಈಗಾಗಲೇ ಇರುವ ಫೋಟೋಗಳ ಬಣ್ಣಗಳು ಮತ್ತು ಸ್ಟೈಲ್ ಗಳನ್ನು ಬಳಸಿಕೊಂಡು ಕಸ್ಟಮ್ ಫಿಲ್ಟರ್ ಕ್ರಿಯೇಷನ್ ಆಯ್ಕೆ ಒದಗಿಸುತ್ತವೆ ಮತ್ತು ಆ ಮೂಲಕ ಮನಸ್ಥಿತಿ ಮತ್ತು ಅಭಿರುಚಿಗೆ ಅನುಗುಣವಾಗಿ ವಿಶಿಷ್ಟ ಮತ್ತು ವೈಯಕ್ತೀಕರಿಸಿದ ಸ್ಪರ್ಶವನ್ನು ಫೋಟೋಗಳಿಗೆ ನೀಡಬಹುದಾಗಿದೆ.

ಆಕರ್ಷಕ ವಿನ್ಯಾಸ: ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಫೋನ್ ಗಳು ಸಂಪೂರ್ಣ ಹೊಸ ವಿನ್ಯಾಸ ಭಾಷೆಯಲ್ಲಿ ಲಭ್ಯವಿದ್ದು, ಇದು ಈಗ ಗ್ಯಾಲಕ್ಸಿ ಎ ಸರಣಿಗೆ ಹೊಸ ಮಾನದಂಡ ಹಾಕಿಕೊಟ್ಟಿದೆ. ಈ ಹೊಸ ವಿನ್ಯಾಸ ಭಾಷೆ ಲೀನಿಯರ್ ಫ್ಲೋಟಿಂಗ್ ಕ್ಯಾಮೆರಾ ಮಾಡ್ಯೂಲ್ ಮತ್ತು ‘ರೇಡಿಯನ್ಸ್’ ಎಂಬ ಆಕರ್ಷಕ ಬಣ್ಣದ ಥೀಮ್ ಅನ್ನು ಒಳಗೊಂಡಿದೆ. ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಕರ್ಷಕ ಸ್ಲಿಮ್ ಡಿವೈಸ್‌ ಗಳಾಗಿದ್ದು, ಕೇವಲ 7.4 ಎಂಎಂ ದಪ್ಪವನ್ನು ಹೊಂದಿವೆ.

ಆಕರ್ಷಕ ಡಿಸ್‌ ಪ್ಲೇ: ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಉತ್ತಮ-ಗುಣಮಟ್ಟದ, ಆಕರ್ಷಕ ವೀಕ್ಷಣಾ ಅನುಭವ ಒದಗಿಸುವ ದೊಡ್ಡ ಡಿಸ್‌ ಪ್ಲೇಯನ್ನು ಹೊಂದಿವೆ. ಎರಡೂ ಮೊಬೈಲ್ ಗಳು 6.7-ಇಂಚಿನ ಎಫ್ಎಚ್ ಡಿ+ ಸೂಪರ್ ಅಮೋಲ್ಡ್ ಡಿಸ್‌ ಪ್ಲೇಯನ್ನು ಹೊಂದಿದ್ದು, 1200 ನಿಟ್‌ ಗಳವರೆಗಿನ ಬ್ರೈಟ್ ನೆಸ್ ಅನ್ನು ಹೊಂದಿದೆ. ಹೊಸ ಸ್ಟಿರಿಯೋ ಅತ್ಯುತ್ತಮ ಆಡಿಯೋ ಹೊಂದಿದೆ.

ಆಕರ್ಷಕ ಕ್ಯಾಮೆರಾ: ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಸ್ಮಾರ್ಟ್‌ ಫೋನ್‌ ಗಳು ಶಕ್ತಿಶಾಲಿ ಟ್ರಿಪಲ್- ಕ್ಯಾಮೆರಾ ಸಿಸ್ಟಮ್‌ ಹೊಂದಿದ್ದು, ಇದರಲ್ಲಿ 50 ಎಂಪಿ ಮುಖ್ಯ ಲೆನ್ಸ್ ಇದೆ. ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಮೊಬೈಲ್ ಗಳು ಉತ್ತಮ ಮತ್ತು ಸ್ಪಷ್ಟ ಸೆಲ್ಫಿಗಳನ್ನು ಒದಗಿಸುವ 10 ಬಿಟ್ ಹೆಚ್ ಡಿ ಆರ್ ಫ್ರಂಟ್ ಲೆನ್ಸ್ ರೆಕಾರ್ಡಿಂಗ್ ಸೌಲಭ್ಯ ಹೊಂದಿವೆ. ಗ್ಯಾಲಕ್ಸಿ ಎ56 5ಜಿ 12 ಎಂಪಿ ಅಲ್ಟ್ರಾ-ವೈಡ್ ಲೆನ್ಸ್‌ ನೊಂದಿಗೆ ಬರುತ್ತದೆ ಮತ್ತು ಅತ್ಯುತ್ತಮ ನೈಟೋಗ್ರಫಿ ಸೌಲಭ್ಯ ಒದಗಿಸುತ್ತದೆ. ಲೋ ನಾಯ್ಸ್ ಮೋಡ್ ಮೂಲಕ 12 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿಯೂ ಕಡಿಮೆ ಬೆಳಕಿನ ಸಂದರ್ಭಗಳಲ್ಲಿ ಅತ್ಯುತ್ತಮ ಫೋಟೋ ತೆಗೆಯಬಹುದಾಗಿದೆ ಮತ್ತು ಹೆಚ್ಚುವರಿ ವೈಡ್ ಕ್ಯಾಮೆರಾ ಬೆಂಬಲ ಕೂಡ ಇದೆ.

ಅತ್ಯುತ್ತಮ ಕಾರ್ಯಕ್ಷಮತೆ: ಎರಡೂ ಮಾಡೆಲ್ ಗಳು ಸುಲಭವಾಗಿ ಮಲ್ಟಿಟಾಸ್ಕಿಂಗ್ ಮಾಡಲು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ. ಗ್ಯಾಲಕ್ಸಿ ಎ56 5ಜಿ ಎಕ್ಸಿನೋಸ್ 1580 ಚಿಪ್‌ ಸೆಟ್‌ ನಿಂದ ಚಾಲಿತವಾಗಿದೆ ಮತ್ತು ಗ್ಯಾಲಕ್ಸಿ ಎ36 5ಜಿ ಸ್ನ್ಯಾಪ್‌ ಡ್ರಾಗನ್® 6 ಜೆನ್ 3 ಮೊಬೈಲ್ ಪ್ಲಾಟ್‌ ಫಾರ್ಮ್‌ ಆಧರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಎರಡೂ ಸಾಧನಗಳಲ್ಲಿ ದೊಡ್ಡ ವೇಪರ್ ಚೇಂಬರ್ ಇದ್ದು, ಅದು ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಸುಗಮವಾಗಿ ಗೇಮ್‌ ಆಡಲು ಮತ್ತು ವೀಡಿಯೋ ನೋಡಲು ಅನುವು ಮಾಡಿಕೊಡುತ್ತದೆ.

ಉತ್ತಮ ಬ್ಯಾಟರಿ: 5,000 ಎಂಎಎಚ್ ಬ್ಯಾಟರಿ ಹೊಂದಿರುವ ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಮೊಬೈಲ್ ಗಳನ್ನು ಬಳಕೆದಾರರ ದೈನಂದಿನ ಚಟುವಟಿಕೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ 45 ವಾರ್ಪ್ ಚಾರ್ಜಿಂಗ್ ಪವರ್ ಮತ್ತು ಸೂಪರ್-ಫಾಸ್ಟ್ ಚಾರ್ಜ್ 2.0 ತಂತ್ರಜ್ಞಾನವನ್ನು ಹೊಂದಿದ್ದು, ಉತ್ತಮ ಬಳಕೆಯ ಸೌಕರ್ಯಕ್ಕಾಗಿ ವೇಗವಾಗಿ ಚಾರ್ಜಿಂಗ್ ಮಾಡಬಹುದಾಗಿದೆ.

ಅತ್ಯುತ್ತಮ ಬಾಳಿಕೆ: ಗ್ಯಾಲಕ್ಸಿ ಎ36 5ಜಿ ಮತ್ತು ಗ್ಯಾಲಕ್ಸಿ ಎ56 5ಜಿ ಮೊಬೈಲ್ ಗಳು ಐಪಿ67 ಧೂಳು ಮತ್ತು ನೀರು ನಿರೋಧಕ ರೇಟಿಂಗ್ ಅನ್ನು ಹೊಂದಿವೆ. ಇದರ ಜೊತೆಗೆ, ಅತ್ಯಾಧುನಿಕ ಕಾರ್ನಿಂಗ್® ಗೊರಿಲ್ಲಾ ವಿಕ್ಟಸ್+ ಗ್ಲಾಸ್, ಗೀರುಗಳು ಮತ್ತು ಬಿರುಕುಗಳು ಉಂಟಾಗದಂತೆ ಉತ್ತಮ ರಕ್ಷಣಾ ಪದರವನ್ನು ಒದಗಿಸುತ್ತದೆ. ಆರು ಜನರೇಷನ್ ಗಳ ಆಂಡ್ರಾಯ್ಡ್ ಓಎಸ್ ಮತ್ತು ಆರು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಗಳನ್ನು ಹೊಂದುವ ಮೂಲಕ ಹೊಸ ಗ್ಯಾಲಕ್ಸಿ ಎ ಸರಣಿಯು ಸಾಫ್ಟ್‌ ವೇರ್ ದೀರ್ಘಾಯುಷ್ಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ನವೀಕರಣಗಳು ಮೊಬೈಲ್ ಗಳ ಜೀವನ ಚಕ್ರವನ್ನು ಉತ್ತಮಗೊಳಿಸಲು ಬೆಂಬಲವನ್ನು ನೀಡಲಿದ್ದು, ಬಳಕೆದಾರರು ದೀರ್ಘಕಾಲದವರೆಗೆ ಸುಗಮ ಮತ್ತು ವಿಶ್ವಾಸಾರ್ಹ ಅನುಭವವನ್ನು ಹೊಂದಬಹುದಾಗಿದೆ.

ಅತ್ಯುತ್ತಮ ಭದ್ರತೆ ಮತ್ತು ಗೌಪ್ಯತೆ: ಗ್ಯಾಲಕ್ಸಿ ಎ ಸರಣಿಯಲ್ಲಿ ಮೊದಲ ಬಾರಿಗೆ ಒನ್ ಯುಐ7 ಏಕೀಕರಣದೊಂದಿಗೆ, ಸ್ಯಾಮ್‌ ಸಂಗ್ ದೃಢವಾದ ಭದ್ರತೆ ಮತ್ತು ಪ್ರೈವೆಸಿಯನ್ನು ಒದಗಿಸುತ್ತಿದೆ. ಸ್ಯಾಮ್‌ ಸಂಗ್ ನಾಕ್ಸ್ ವಾಲ್ಟ್‌ ಮೂಲಕ ಗ್ಯಾಲಕ್ಸಿ ಎ ಸರಣಿಯು ಮೊಬೈಲ್ ಗಳಿಗೆ ಸುರಕ್ಷತೆ, ಪಾರದರ್ಶಕತೆ ಮತ್ತು ಬಳಕೆದಾರರ ಆಯ್ಕೆಯ ವಿಚಾರದಲ್ಲಿ ಹೆಚ್ಚುವರಿ ಭದ್ರತಾ ಪದರವನ್ನು ಒದಗಿಸುತ್ತದೆ. ಈ ಮೂಲಕ ಸೂಕ್ಷ್ಮ ಡೇಟಾ ಯಾವಾಗಲೂ ಸಂರಕ್ಷಿತವಾಗಿರುತ್ತದೆ ಎಂದು ಖಚಿತಪಡಿಸುತ್ತದೆ. ಹೊಸ ಒನ್ ಯುಐ7 ಭದ್ರತೆ ಮತ್ತು ಪ್ರೈವೆಸಿ ಫೀಚರ್ ಗಳೊಂದಿಗೆ ಸಜ್ಜಿತವಾಗಿರುವ ಗ್ಯಾಲಕ್ಸಿ ಎ ಸರಣಿಯ ಬಳಕೆದಾರರು ಸರ್ವತೋಮುಖ ಸಂರಕ್ಷಣೆಯ ಪ್ರಯೋಜನವನ್ನು ಪಡೆಯುತ್ತಾರೆ. ಜೊತೆಹೆ ಇದರಲ್ಲಿ ಥೆಫ್ಟ್ ಡಿಟೆಕ್ಷನ್, ಹೆಚ್ಚಿನ ಭದ್ರತಾ ಸೆಟ್ಟಿಂಗ್‌ ಗಳು ಮತ್ತು ಇತರ ಫೀಚರ್ ಗಳು ಲಭ್ಯವಿದೆ.

ವೇರಿಯೆಂಟ್‌ಗಳು, ಬೆಲೆ, ಬಣ್ಣಗಳು ಮತ್ತು ಆಫರ್: ಪ್ರಾರಂಭಿಕ ಆಫರ್ ಗಳ ಭಾಗವಾಗಿ ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಖರೀದಿಸುವ ಗ್ರಾಹಕರು 3000 ರೂಪಾಯಿ ಮೌಲ್ಯದ ಉಚಿತ ಸ್ಟೋರೇಜ್ ಅಪ್ ಗ್ರೇಡ್ ಸೌಲಭ್ಯ ಪಡೆಯುತ್ತಾರೆ. ಗ್ರಾಹಕರು 12ಜಿಬಿ 256ಜಿಬಿ ವೇರಿಯೆಂಟ್ ಅನ್ನು 8ಜಿಬಿ 256ಜಿಬಿ ವೇರಿಯೆಂಟ್ ಬೆಲೆಯಲ್ಲಿ ಮತ್ತು 8ಜಿಬಿ 256ಜಿಬಿ ವೇರಿಯೆಂಟ್ ಅನ್ನು 8ಜಿಬಿ 128ಜಿಬಿ ವೇರಿಯೆಂಟ್ ಬೆಲೆಯಲ್ಲಿ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯುತ್ತಾರೆ.