ಬೆಂಗಳೂರು: ಅಚ್ಚೇ ದಿನದ ಬದಲಿಗೆ ಅನ್ಯಾಯದ ದಿನಗಳು ದೇಶಕ್ಕೆ ಬಂದಿದ್ದು, ಜನರು ಪ್ರತಿದಿನವೂ ಪರಿತಪಿಸುವಂತ ಪರಿಸ್ಥಿತಿ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನ ಸಾಮಾನ್ಯರ ಪಾಲಿಗೆ ಹೊರೆಯಾಗುತ್ತಿದೆ. ಅಚ್ಚೇ ದಿನದ ಬದಲಿಗೆ ಅನ್ಯಾಯದ ದಿನಗಳು ದೇಶಕ್ಕೆ ಬಂದಿದ್ದು, ಜನರು ಪ್ರತಿದಿನವೂ ಪರಿತಪಿಸುವಂತ ಪರಿಸ್ಥಿತಿ ಬಂದಿದೆ.
ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೇ, ಪ್ರತಿ ಜಿಲ್ಲಾ, ತಾಲೂಕು ಹಾಗೂ ಬ್ಲಾಕ್ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದರು.