ಅಂಗನವಾಡಿ ಸಾಮಾನು ಕಾಳಸಂತೆಯಲ್ಲಿ ಮಾರಾಟ

0
18

ಕೆಂಭಾವಿ: ಮೂಟೆಗಟ್ಟಲೇ ಅಂಗನವಾಡಿ ಆಹಾರ ಪದಾರ್ಥ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ.


  ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಅಂಗನವಾಡಿ ಕೇಂದ್ರ-2ರ ಅಕ್ರಮ ಬಯಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಉಮಾರಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅಕ್ಕಿ, ಬೇಳೆ, ಶೇಂಗಾ, ಬೆಲ್ಲ, ಚಿಕ್ಕೆ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಸರ್ಕಾರದಿಂದ ಬರುವ ಆಹಾರ ಪದಾರ್ಥಗಳನ್ನು ಮೂಟೆಯಲ್ಲಿ ಉಮಾ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಸ್ಥಳೀಯರ ಮೊಬೈಲ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕಳ್ಳಾಟ ಬಯಲಾಗಿದೆ. ಇನ್ನು
ಈ ವಿಡಿಯೋ ವೈರಲ್ ಆಗುತ್ತಿದಂತೆ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯನ್ನು  ಅಮಾನತ್ತು ಗೊಳಿಸಿ ಆದೇಶಿಸಿದ್ದಾರೆ

Previous articleKAS ಪರೀಕ್ಷಾರ್ಥಿಗಳಿಗೆ ಹೊಸ ಸಮಸ್ಯೆ
Next articleಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ