Home Advertisement
Home ತಾಜಾ ಸುದ್ದಿ ಅಂಗಡಿ ಹಾಕಲು ಮುಸ್ಲಿಮ್‌ರಿಗೆ ನಿರ್ಬಂಧ

ಅಂಗಡಿ ಹಾಕಲು ಮುಸ್ಲಿಮ್‌ರಿಗೆ ನಿರ್ಬಂಧ

0
102

ಪಣಜಿ: ಹಿಂದೂಗಳ ಧಾರ್ಮಿಕ ಉತ್ಸವದಲ್ಲಿ ಮುಸ್ಲಿಮರು ಅಂಗಡಿ ಹಾಕಲು ವಿರೋಧಿಸುವ ಹಿಂದುತ್ವವಾದಿಗಳು ಇದೀಗ ಉತ್ತರ ಗೋವಾಕ್ಕೆ ಆಗಮಿಸಿದ್ದು ಡಿಸೆಂಬರ್ ೨೨ರಿಂದ ಪೆಡ್ನೆ ತಾಲೂಕಿನ ಹಸಾಪುರದಲ್ಲಿ ಸಾತೇರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಅಂಗಡಿ ಹಾಕಲು ತಡೆಯಲಾಗಿದೆ. ಅಂತೆಯೇ ಜಾತ್ರೋತ್ಸವದ ಸ್ಥಳದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಅಂಗಡಿ ಹಾಕಲು ನಿರ್ಬಂಧಿಸುವ ಕುರಿತಂತೆ ಜಾಗೃತಿ ಫಲಕ ಹಾಕಲಾಗಿದೆ.
ಈ ಕುರಿತಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಂತೋಷ ಮಳಿಕ್ ಮಾಹಿತಿ ನೀಡಿ, ಹಸಾಪುರ ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಅಂಗಡಿ ಹಾಕಲು ನಿರ್ಬಂಧ ಹೇರಲಾಗಿದೆ. ಈ ಕುರಿತಂತೆ ಫಲಕ ಹಾಕಿ ಜಾಗೃತಿ ಮೂಡಿಸಲಾಗುತ್ತಿದೆ. ಜಾತ್ರೋತ್ಸವದಲ್ಲಿ ಮುಸ್ಲಿಂರೋರ್ವರು ಅಂಗಡಿ ಹಾಕಲು ಸಿದ್ಧಪಡಿಸುತ್ತಿದ್ದರು, ಆದರೆ ದೇವಸ್ಥಾನದ ಪದಾಧಿಕಾರಿಗಳಿಗೆ ಇದು ಗಮನಕ್ಕೆ ಬಂದಕೂಡಲೇ ಕೂಡಲೇ ಸ್ಟಾಲ್ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇನ್ನು ಮುಂದೆ ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.

Previous articleವಿನೋದ್ ಕಾಂಬ್ಳಿ ದಿಢೀರ್ ಆಸ್ಪತ್ರೆಗೆ ದಾಖಲು
Next articleಸಿ.ಟಿ. ರವಿ ವಿರುದ್ಧ ಪ್ರಧಾನಿಗೆ ದೂರು: ಹೆಬ್ಬಾಳ್ಕರ್‌ ಸವಾಲು