ಅಂಕಲ್‌ನೊಂದಿಗೆ ಯುವತಿ ನಾಪತ್ತೆ: ಪೋಷಕರ ದೂರು

0
24

ಹುಬ್ಬಳ್ಳಿ: ಮೊಮ್ಮಗಳ ವಯಸ್ಸಿನ ಯುವತಿಯನ್ನು 50 ವರ್ಷದ ವ್ಯಕ್ತಿ ಕರೆದುಕೊಂಡು ಹೋಗಿರುವ ಅನುಮಾನ ವ್ಯಕ್ತವಾಗಿದ್ದು, ಇಲ್ಲಿಯ ಕೇಶ್ವಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಕೇಶ್ವಾಪುರದ 18 ವರ್ಷ ಹುಡುಗಿಯನ್ನು 50 ವರ್ಷದ ಪ್ರಕಾಶ ಎಂಬಾತ ಕರೆದುಕೊಂಡು ಹೋಗಿದ್ದಾನೆ ಎಂದು ಹುಬ್ಬಳ್ಳಿಯ ದೀಪಕ್ ಹಾಗೂ ಶೀತಲ ಎಂಬುವರು ಆರೋಪಿಸಿದ್ದಾರೆ.
ಕೊಲ್ಹಾಪುರದ ಅಜ್ಜಿ ಮನೆಯಲ್ಲಿದ್ದ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿ ಪಾಲಕರು ದೂರಿನಲ್ಲಿ ವಿವರಿಸಿದ್ದಾರೆ.
ಕೊಲ್ಲಾಪುರದ ಅಜ್ಜಿ ಮನೆಯಲ್ಲಿದ್ದ ಯುವತಿ ನಾಪತ್ತೆಯಾಗಿದ್ದು, ಕೊಲ್ಲಾಪುರದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕೊಲ್ಲಾಪುರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
2024ರಲ್ಲಿ ಯುವತಿಗೆ ಪ್ರಕಾಶ ಕಾಡಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಕಾಶನ ಮೇಲೆ ಫೋಕ್ಸೋ ಪ್ರಕರಣವಿದೆ. ಪಾಲಕರು, ಆತನೇ ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ, ಮಗಳನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಠಾಣೆ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Previous articleಲಾಡಿ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿದ ಬ್ಯಾನರ್‌ಗೆ ಹಾನಿ: ಇಬ್ಬರ ಬಂಧನ
Next articleಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಕಾರು