UPSC Preliminary Exams: ಬೆಳಿಗ್ಗೆ 6ರಿಂದಲೇ ನಮ್ಮ ಮೆಟ್ರೊ ಸಂಚಾರ ಆರಂಭ

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುವು ಆಗುವಂತೆ ನಮ್ಮ ಮೆಟ್ರೊ ಸೇವೆಯನ್ನು ಬೆಳಿಗ್ಗೆ 6 ರಿಂದಲೇ ಆರಂಭಿಸಲಿದೆ.
ದಿನಾಂಕ 25.05.2025 ಭಾನುವಾರ ದಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ UPSC Preliminary Exams, 2025) ನಡೆಯಲಿರುವುದರಿಂದ, ಮೆಟ್ರೋ. #BMRCL ರೈಲು ಸೇವೆಗಳು ವೈಟ್‌ ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ಮಾದಾವರ ಮತ್ತು ರೇಷ್ಮೆ ಸಂಸ್ಥೆ, ಈ ನಾಲ್ಕು ಟರ್ಮಿನಲ್‌ ನಿಲ್ದಾಣಗಳಿಂದ ಬೆಳಿಗ್ಗೆ 6 ಗಂಟೆಗೆ ಮೆಟ್ರೋ ಸೇವೆ ಸಿಗಲಿದೆ, ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಮೆಟ್ರೊ ರೈಲು ಸಂಚಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗುತ್ತದೆ. ಆದರೆ ನಾಳೆ ಯುಪಿಎಸ್‌ಸಿ ಪರೀಕ್ಷೆ ಇರುವ ಕಾರಣ ಬೆಳಿಗ್ಗೆ 6 ರಿಂದಲೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ.