SSLC ಫಲಿತಾಂಶ ಉಡುಪಿ ಫಸ್ಟ್- ಯಾದಗಿರಿ ಲಾಸ್ಟ್

0
19

ಬೆಂಗಳೂರು: ಕರ್ನಾಟಕದ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ತಿಳಿಸಿದ್ದಾರೆ.
ಈ ಸಾಲಿನಲ್ಲಿ 6.31.204 ವಿದ್ಯಾರ್ಥಿಗಳು ಪಾಸ ಆಗಿದ್ದು ಕರ್ನಾಟಕದಲ್ಲಿ 2024ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತೀರ್ಣ ಪ್ರಮಾಣ ಶೇಕಡ 73.40 ರಷ್ಟು ಎಂದಿನಂತೆ ಬಾಲಕಿಯರ ಮೇಲುಗೈ ಸಾದಿಸಿದ್ದು ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊನೆಯ ಸಾಲಿನಲ್ಲಿ ಯಾದಗಿರಿ ಜಿಲ್ಲೆ ಪಡೆದಿದೆ. ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ, ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.

ಕರ್ನಾಟಕದಲ್ಲಿ 2023ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತೀರ್ಣ ಪ್ರಮಾಣ ಶೇಕಡ 83.88 ದಾಖಲಾಗಿತ್ತು. ಅಂದರೆ, ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಬಾಲಕರು – 3,41,108( 80.08%) ಹಾಗೂ ಬಾಲಕಿಯರು – 3,59,511( 87.98%) ಉತ್ತೀರ್ಣರಾಗಿದ್ದರು.

Previous articleಕೆಲವೇ ಕ್ಷಣದಲ್ಲಿ SSLC ಪರೀಕ್ಷೆ ಫಲಿತಾಂಶ ಪ್ರಕಟ
Next articleರಾಜ್ಯಕ್ಕೆ ಪ್ರಥಮ ಸ್ಥಾ‌ನ ಪಡೆದ ಬಾಗಲಕೋಟೆ ವಿದ್ಯಾರ್ಥಿನಿ