SSLC Result: ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೇ ಬೆಸ್ಟ್‌

0
28

ಬೆಂಗಳೂರು: ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳೇ ಬೆಸ್ಟ್‌ ಎಂದು ಎನಿಸಿಕೊಂಡಿದ್ದಾರೆ.
ಮಾಧ್ಯಮವಾರು ಫಲಿತಾಂಶವನ್ನು ಗಮನಿಸಿದರೆ, ಆಂಗ್ಲ ಮಾಧ್ಯಮದಲ್ಲಿ 3,35,974 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 2,63,333 ಜನ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ. 78.38 ರಷ್ಟು ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ತೆಲುಗು ಮಾಧ್ಯಮದಲ್ಲಿ 114 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 85 ಜನ ಪಾಸ್‌ ಆಗಿದ್ದು, ಶೇ. 74.56 ರಷ್ಟು ಫಲಿತಾಂಶವಾಗಿದೆ.
ಇನ್ನು ಕನ್ನಡ ಮಾಧ್ಯಮದಲ್ಲಿಯೇ ಅತೀ ಹೆಚ್ಚು ಅಂದರೆ 4,27,379 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ 2,46,230 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 57.61 ರಷ್ಟು ಫಲಿತಾಂಶವಾಗಿದೆ.
ಮರಾಠಿ ಮಾಧ್ಯಮ 53.97, ಹಿಂದಿ ಮಾಧ್ಯಮ 53.72, ಉರ್ದು ಮಾಧ್ಯಮ 46.46 ಮತ್ತು ತಮಿಳು ಮಾಧ್ಯಮದಲ್ಲಿ 37.88 ರಷ್ಟು ಫಲಿತಾಂಶವಾಗಿದೆ.

Previous articleಎಸ್‌ಎಸ್‌ಎಲ್‌ಸಿ ಫಲಿತಾಂಶ ಫಸ್ಟ್‌ಕ್ಲಾಸ್‌
Next articleSSLC Result: 22 ವಿದ್ಯಾರ್ಥಿಗಳು ಪ್ರಥಮ