SSLC Result: 22 ವಿದ್ಯಾರ್ಥಿಗಳು ಪ್ರಥಮ

ಬೆಂಗಳೂರು: 2025ರ ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 22 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರು ದಕ್ಷಿಣ ಮತ್ತು ಶಿವಮೊಗ್ಗ ಜಿಲ್ಲೆಯಿಂದ ತಲಾ ಮೂವರು ವಿದ್ಯಾರ್ಥಿ 625ಕ್ಕೆ 625 ಅಂಕ ಪಡೆದ್ದಾರೆ. ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗ, ಮೈಸೂರು ಜಿಲ್ಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.
ಮಂಡ್ಯ, ಹಾಸನ, ಮಧುಗಿರಿ, ಉಡುಪಿ, ತುಮಕೂರು, ಶಿರಸಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯಿಂದ ತಲಾ 1 ವಿದ್ಯಾರ್ಥಿಯಂತೆ ಒಟ್ಟಾರೆ 22 ಜನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು ಈ ಬಾರಿಯ ವಿಶೇಷ.

1 ಅಖಿಲಾ ಅಹ್ಮದ್ ನಡಾಪ್ – ವಿಜಯಪುರ
2 ಭಾವನಾ – ಬೆಂಗಳೂರು ಗ್ರಾಮಾಂತರ
3 ರಂಜಿತಾ – ಬೆಂಗಳೂರು ಗ್ರಾಮಾಂತರ
4 ಮಧುಸೂದನ್ ರಾಜು – ಬೆಂಗಳೂರು ಉತ್ತರ
5 ಧನಲಕ್ಷ್ಮಿ ಎಂ – ಬೆಂಗಳೂರು ಉತ್ತರ
6 ಧನುಷ್ – ಮೈಸೂರು
7 ಧೃತಿ – ಮಂಡ್ಯ
8 ಜಾಹ್ನವಿ – ಬೆಂಗಳೂರು ದಕ್ಷಿಣ
9 ನಮಿತಾ – ಬೆಂಗಳೂರು ದಕ್ಷಿಣ
10 ಯುಕ್ತಿ – ಬೆಂಗಳೂರು ದಕ್ಷಿಣ
11 ಮೊಹಮ್ಮದ್ ಮಸ್ತೂರ್ ಆದಿಲ್ – ತುಮಕೂರು
12 ನಮನ – ಶಿವಮೊಗ್ಗ
13 ನಿತ್ಯಾ ಎಂ ಕುಲಕರ್ಣಿ – ಶಿವಮೊಗ್ಗ
14 ಶಹಿಷ್ಣು – ಶಿವಮೊಗ್ಗ
15 ನಂದನ್ – ಚಿತ್ರದುರ್ಗ
16 ಮೌಲ್ಯ ಡಿ ರಾಜ್ – ಚಿತ್ರದುರ್ಗ
17 ರೂಪ ಚನ್ನಗೌಡ ಪಾಟೀಲ್ – ಬೆಳಗಾವಿ
18 ಶಗುಫ್ತಾ ಅಂಜುಮ್ – ಸಿರಸಿ
19 ಸ್ವಸ್ತಿ ಕಾಮತ್ – ಉಡುಪಿ
20 ತನ್ಯಾ – ಮೈಸೂರು
21 ಉತ್ಸವ್ ಪಾಟೀಲ್ – ಹಾಸನ
22 ಯಶವಂತ್ ರೆಡ್ಡಿ – ಮಧುಗಿರಿ