ನವದೆಹಲಿ: ಐಪಿಎಸ್ ಸದಾನಂದ್ ವಸಂತ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದ್ದು, ಐಪಿಎಸ್ ಪಿಯೂಷ್ ಆನಂದ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಬಾಲಾಜಿ ಶ್ರೀವಾಸ್ತವ ಅವರ ನಂತರ ಶರ್ಮಾ ಅವರು ಅಧಿಕಾರ ವಹಿಸಿಕೊಳ್ಳುತ್ತಾರೆ.ಪಿಯೂಷ್ ಆನಂದ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‍ಡಿಆರ್‍ಎಫ್) ನೂತನ ಮುಖ್ಯಸ್ಥರಾಗಲಿದ್ದಾರೆ. ಉತ್ತರ ಪ್ರದೇಶ ಕೇಡರ್‍ನ 1991-ಬ್ಯಾಚ್‍ನ ಐಪಿಎಸ್ ಅಧಿಕಾರಿ, ಆನಂದ್ ಪ್ರಸ್ತುತ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‍ಎಫ್) ವಿಶೇಷ ಡಿಜಿಯಾಗಿದ್ದಾರೆ. ಅವರನ್ನು ಎರಡು ವರ್ಷಗಳ ಅವಧಿಗೆ NDRF ನ ಡಿಜಿಯಾಗಿ ನೇಮಿಸಲಾಗಿದ್ದು, ಎಸಿಸಿಯು ಕೇರಳ ಕೇಡರ್‍ನ 1995-ಬ್ಯಾಚ್ ಐಪಿಎಸ್ ಅಧಿಕಾರಿ ಎಸ್ ಸುರೇಶ್ ಅವರನ್ನು ವಿಶೇಷ ರಕ್ಷಣಾ ಗುಂಪಿನ (ಎಸ್‍ಪಿಜಿ) ಹೆಚ್ಚುವರಿ ಮಹಾನಿರ್ದೇಶಕರನ್ನಾಗಿ ನೇಮಿಸಿದೆ.























