ಮಾಲೆಗಾಂವ್‌ ಸ್ಫೋಟ ಪಕ್ರರಣ: ಸಾಧ್ವಿ ಪ್ರಜ್ಞಾ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆ

0
63

ಮುಂಬೈ: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಾಲೇಗಾಂವ್ ನಗರದಲ್ಲಿ 17 ವರ್ಷಗಳ ಹಿಂದೆ ನಡೆದ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. 2008ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಜ್ಞಾ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ಮುಂಬೈನಲ್ಲಿರುವ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಎನ್‌ಐಎ ಕೋರ್ಟ್ ತನ್ನ ಆದೇಶದಲ್ಲಿ ಕೇವಲ ಅನಮಾನ ಮಾತ್ರವಿದ್ದರೆ ಸಾಲದು ಸಾಕ್ಷ್ಯಗಳು ಬೇಕು ಎಂದು ಅಭಿಪ್ರಾಯಪಟ್ಟಿದೆ. ನಿವೃತ್ತ ಸೇನಾಧಿಕಾರಿ ರಮೇಶ್ ಶಿವಾಜಿ ಉಪಾಧ್ಯಾಯ (73), ಪುಣೆ ಮೂಲದ ಉದ್ಯಮಿ ಸಮೀರ್ ಶರದ್ ಕುಲಕರ್ಣಿ (53), ಪುರೋಹಿತ್ ಅವರ ನಿಕಟವರ್ತಿಗಳಾದ ಅಜಯ್ ಏಕನಾಥ್ ರಹಿರ್ಕರ್ (56) ಮತ್ತು ಸುಧಾಕರ್ ಓಂಕಾರನಾಥ್ ಚತುರ್ವೇದಿ (53) ಮತ್ತು ಸುಧಾಕರ್ ಓಂಕಾರನಾಥ್ ಚತುರ್ವೇದಿ (53), ಸುಧಾಕರ್ ಧರ್ ದ್ವಿವೇದಿ (53) ಈ ಪ್ರಕರಣದ ಆರೋಪಿಗಳಾಗಿದ್ದು, ಅವರನ್ನು ಖುಲಾಸೆಗೊಳಿಸಿದೆ.

ಮಹಾರಾಷ್ಟ್ರದ ಮಾಲೇಗಾಂವ್‌ನ ಮುಸ್ಲಿಂ ಪ್ರದೇಶದ ಮಸೀದಿಯ ಬಳಿ ಮೋಟಾರ್ ಸೈಕಲ್‌ಗೆ ಜೋಡಿಸಲಾದ ಬಾಂಬ್ ಸ್ಪೋಟಗೊಂಡಿತ್ತು. 6 ಜನರು ಸಾವನ್ನಪ್ಪಿದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟದ ಸಮಯವು ರಂಜಾನ್‌ ತಿಂಗಳಾಗಿತ್ತು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಆರಂಭದಲ್ಲಿ ತನಿಖೆಯ ನೇತೃತ್ವ ವಹಿಸಿತ್ತು, ಮೋಟಾರ್ ಸೈಕಲ್‌ನ ಮಾಲೀಕರನ್ನು ಪತ್ತೆಹಚ್ಚಿ, ಹಲವರನ್ನು ಬಂಧಿಸಲಾಗಿತ್ತು. 2011ರಲ್ಲಿ ಎನ್‌ಐಎಗೆ ತನಿಖೆ ಹಸ್ತಾಂತರವಾಗಿತ್ತು.

2016ರಲ್ಲಿ ಪೂರಕ ಆರೋಪಪಟ್ಟಿಯಲ್ಲಿ, ಎಟಿಎಸ್‌ನಿಂದ ಕಾನೂನಿನ ಪ್ರಶ್ನಾರ್ಹ ಅನ್ವಯಿಕೆಯನ್ನು ಉಲ್ಲೇಖಿಸಿ ಮತ್ತು ಆರಂಭಿಕ ತನಿಖೆಯ ಸಮಯದಲ್ಲಿ ಕಾರ್ಯವಿಧಾನದ ಅಕ್ರಮಗಳು ಮತ್ತು ಬಲವಂತದ ತಂತ್ರಗಳನ್ನು ಆರೋಪಿಸಿ NIA MCOCA ಆರೋಪಗಳನ್ನು ಕೈಬಿಟ್ಟಿತು.

ಎನ್‌ಐಎ ಕೆಲವು ಆರೋಪಿಗಳನ್ನು ದೋಷಮುಕ್ತಗೊಳಿಸಿದರೂ, ವಿಶೇಷ ನ್ಯಾಯಾಲಯವು ಡಿಸೆಂಬರ್ 27, 2017ರಂದು ಸಾಧ್ವಿ ಪ್ರಜ್ಞಾ ಮತ್ತು ಇತರ 6 ಮಂದಿಯನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ವಿಚಾರಣೆಯನ್ನು ಎದುರಿಸಬೇಕೆಂದು ಆದೇಶ ನೀಡಿತ್ತು.

ಸ್ಫೋಟಕ್ಕೆ ಬಳಸಲಾದ ವಾಹನವನ್ನು ಠಾಕೂರ್ ಒದಗಿಸಿದ್ದಾರೆ ಎಂದು ಎಟಿಎಸ್ ಆರೋಪಿಸಿತ್ತು. ವಾಹನವನ್ನು ಠಾಕೂರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಎಟಿಎಸ್ ಹೇಳಿದೆ. 2018ರಲ್ಲಿ ಪ್ರಾರಂಭವಾದ ಈ ಘಟನೆಗೆ ಸಂಬಂಧಿಸಿದ ವಿಚಾರಣೆ ಏಪ್ರಿಲ್ 19, 2025ರಂದು ಕೊನೆಗೊಂಡಿತ್ತು. ನ್ಯಾಯಾಲಯವು ಪ್ರಕರಣವನ್ನು ತೀರ್ಪಿಗಾಗಿ ಕಾಯ್ದಿರಿಸಿತ್ತು. ವಿಶೇಷ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ ಎಲ್ಲಾ 7 ಮಂದಿಯನ್ನು ಖುಲಾಸೆಗೊಳಿಸಿದೆ.

Previous articleಬುದ್ಧನ ಪವಿತ್ರ ಪಿಪ್ರಾಹ್ವಾ ಅವಶೇಷ 127 ವರ್ಷಗಳ ನಂತರ ಭಾರತಕ್ಕೆ
Next articleಯೂರಿಯಾ ಗೊಬ್ಬರ ಬೇಡಿಕೆ ಹೆಚ್ಚಳಕ್ಕೆ ಕಾರಣ, ರೈತರ ಆತಂಕಗಳು

LEAVE A REPLY

Please enter your comment!
Please enter your name here