KAS ಅಧಿಕಾರಿಯ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
34

ಬೆಂಗಳೂರು: ಕೆಎಎಸ್ ಅಧಿಕಾರಿ ಪತ್ನಿಯೂ ಆಗಿರುವ ಹೈಕೋರ್ಟ್‌ ವಕೀಲರಾದ ಚೈತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
​ನಗರದ ಸಂಜಯ್​ನಗರದ ನಿವಾಸದಲ್ಲಿ ನಡೆದಿದೆ. ಚೈತ್ರಾಗೌಡ ಮೃತ ಮಹಿಳೆಯಾಗಿದ್ದು ವೃತ್ತಿಯಲ್ಲಿ ವಕೀಲರಾಗಿದ್ದರು. ಮನೆಯಲ್ಲಿ ಫ್ಯಾನ್​​ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆ ಆಗಿದ್ದು, ಮನೆಯಲ್ಲಿ ಯಾವುದೇ ಡೆತ್​​ನೋಟ್ ಪತ್ತೆಯಾಗಿಲ್ಲ. ಇನ್ನು ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Previous articleವ್ಯಾಪಾರಿಯನ್ನ ಬೆತ್ತಲೆ ಮಾಡಿ ಹಲ್ಲೆ
Next articleಸರ್ಕಾರ ಬೀಳಿಸುವುದು ಅಸಾಧ್ಯ