ಸುಪ್ರೀಂ ಕೋರ್ಟ್​​ ಆದೇಶ ; ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ

0
27

ನವದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ವಿಚಾರವಾಗಿ ವಕ್ಫ್ ಬೋರ್ಡ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ವಕ್ಫ್‌ ಪರ ಕಪಿಲ್ ಸಿಬಲ್‌ ಹಾಗು ರಾಜ್ಯ ಸರ್ಕಾರದ ಪರವಾಗಿ ಮುಕುಲ್‌ ರೋಹ್ಟಗಿ ಅವರ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ.ಎ ಎಸ್ ಓಕಾ ಹಾಗು ನ್ಯಾ. ಎಂ ಎಂ ಸುಂದರೇಶ್ ಅವರಿದ್ದ ತ್ರಿಸದಸ್ಯ ಪೀಠ, ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ, ಗಣೇಶೋತ್ಸವ ಬೇರೆ ಕಡೆ ಮಾಡಿ. ಮೈದಾನದಲ್ಲಿ ಮುಂದಿನ 2 ದಿನಗಳ ಕಾಲ ಮಧ್ಯಂತರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ತದನಂತರ ಕರ್ನಾಟಕ ಹೈಕೋರ್ಟ್​ನಲ್ಲಿ ಮತ್ತೊಮ್ಮೆ ಪ್ರಶ್ನಿಸಬಹುದು ಎಂದು ಆದೇಶಿಸಿದರು.

Previous articleಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ : ಕಮಿಷನರ್​ಗೆ ಅಧಿಕಾರ ನೀಡಿದ ಹೈಕೋರ್ಟ್
Next articleವಿವಾದಾತ್ಮಕ ಸ್ಥಳದಲ್ಲಿ ಬೆಳಿಗ್ಗೆಯೇ ಗಣೇಶ ಪ್ರತಿಷ್ಠಾಪನೆ