ಸಿದ್ದು, ಡಿಕೆಶಿ ಜತೆಗೆ 8 ಜನ ಸಚಿವರಾಗಿ ಪ್ರಮಾಣ ವಚನ

0
47

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 8 ಜನ ಶಾಸಕರು ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.
ದೆಹಲಿಯಲ್ಲಿ ತಡರಾತ್ರಿ ಹೈಕಮಾಂಡ್ ನಾಯಕರೊಂದಿಗೆ ಸುಮಾರು 5 ಗಂಟೆಗಳ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಿಎಂ ಡಿಸಿಎಂ ಸೇರಿ 10 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವರ ಪಟ್ಟಿ ಇಲ್ಲಿದೆ

  1. ಡಾ.ಜಿ.ಪರಮೇಶ್ವರ್
  2. ಕೆ.ಹೆಚ್. ಮುನಿಯಪ್ಪ
  3. ಕೆ.ಜೆ. ಜಾರ್ಜ್
  4. ಎಂ.ಬಿ.ಪಾಟೀಲ್
  5. ಸತೀಶ್ ಜಾರಕಿಹೊಳಿ
  6. ಪ್ರಿಯಾಂಕ್ ಖರ್ಗೆ
  7. ರಾಮಲಿಂಗ ರೆಡ್ಡಿ
  8. ಜಮೀರ್ ಅಹ್ಮದ್ ಖಾನ್
Previous articleಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ನಿಧನ
Next articleಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಸಂಭ್ರಮ