Home Advertisement
Home ಸುದ್ದಿ ರಾಜ್ಯ ಬೇಸಿಗೆ, ಮಳೆ, ಹೋಳಿ, ಪರೀಕ್ಷೆ, ಯುಗಾದಿ, ರಂಜಾನ್; ಅಬ್ಬಾ.. ಮಾರ್ಚ್ ತಿಂಗಳ ಸ್ಪೆಷಾಲಿಟಿ ಇನ್ನೂ ಏನೇನಿದೆ...

ಬೇಸಿಗೆ, ಮಳೆ, ಹೋಳಿ, ಪರೀಕ್ಷೆ, ಯುಗಾದಿ, ರಂಜಾನ್; ಅಬ್ಬಾ.. ಮಾರ್ಚ್ ತಿಂಗಳ ಸ್ಪೆಷಾಲಿಟಿ ಇನ್ನೂ ಏನೇನಿದೆ ಗೊತ್ತಾ?

0
18

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಹಾಗೆ, ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ಆದರೆ ಮಾರ್ಚ್ ತಿಂಗಳು ಮಾತ್ರ ಜನರ ಬದುಕಿನಲ್ಲಿ ವಿಭಿನ್ನ ಅನುಭವಗಳನ್ನು ನೀಡುತ್ತಿರುವ ತಿಂಗಳಾಗಿ ಪರಿಣಮಿಸಿದೆ. ದಿನಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಘಟನೆಗಳ ಸರಮಾಲೆ ಮಾರ್ಚ್ ತಿಂಗಳನ್ನು ದೀರ್ಘವಾಗಿ ಅನುಭವಿಸುವಂತೆ ಮಾಡಿದೆ.

ಮಾರ್ಚ್ ತಿಂಗಳ ಆರಂಭದಲ್ಲೇ ಹೋಳಿ ಹಬ್ಬದ ಸಂಭ್ರಮ ದೇಶದಾದ್ಯಂತ ಕಳೆಗಟ್ಟಿತ್ತು. ಬಣ್ಣಗಳ ಹಬ್ಬವನ್ನು ಜನರು ಹರ್ಷೋದ್ಘಾರದಿಂದ ಆಚರಿಸಿದರು.

ಇದಾದ ನಂತರ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಹಬ್ಬ ಆರಂಭವಾಯಿತು. ಒಂದೆಡೆ ಹಬ್ಬದ ಸಂಭ್ರಮ, ಮತ್ತೊಂದೆಡೆ ಪರೀಕ್ಷಾ ಒತ್ತಡ — ಎರಡನ್ನೂ ಸಮನಾಗಿ ಎದುರಿಸುವ ಪರಿಸ್ಥಿತಿ ಕಂಡುಬಂದಿತು.

ಯುಗಾದಿ ಹಬ್ಬದ ಮೂಲಕ ಹೊಸ ವರ್ಷದ ಸಂಭ್ರಮವೂ ಮನೆಮಾಡಿತು. ಬೇವು-ಬೆಲ್ಲದ ಮೂಲಕ ಜೀವನದ ಸಿಹಿ-ಕಹಿ ಅನುಭವಗಳನ್ನು ಸ್ವೀಕರಿಸುವ ಸಂದೇಶ ನೀಡಲಾಯಿತು.

ಇದೇ ಸಂದರ್ಭದಲ್ಲಿ ಕ್ರೀಡಾಭಿಮಾನಿಗಳಿಗೆ ವಿಶ್ವಕಪ್ ಕಾದಾಟ ಉತ್ಸಾಹ ತಂದಿದ್ದರೆ, ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆಯ ವಾತಾವರಣವೂ ಕಾಣಿಸಿಕೊಂಡಿದೆ.

ದೇಶದ ಕೆಲ ಭಾಗಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಜನರಿಗೆ ತೊಂದರೆ ಉಂಟುಮಾಡಿದ್ದು, ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರಿದೆ.

ಇನ್ನೊಂದೆಡೆ ಹವಾಮಾನದಲ್ಲಿ ಏರುಪೇರು ಮುಂದುವರಿದಿದೆ. ಬೆಳಿಗ್ಗೆ ಚಳಿ, ಮಧ್ಯಾಹ್ನ ಬಿಸಿಲು, ಕೆಲವೆಡೆ ಆಲಿಕಲ್ಲು ಮಳೆಯಂತಹ ಅಸಾಮಾನ್ಯ ಘಟನೆಗಳು ವರದಿಯಾಗಿವೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ಭಾರೀ ಆಲಿಕಲ್ಲು ಮಳೆ ಸುರಿದಿದೆ.ಒಟ್ಟಾರೆ, ಹಬ್ಬಗಳು, ಪರೀಕ್ಷೆಗಳು, ಹವಾಮಾನ ವೈಚಿತ್ರ್ಯ, ಕ್ರೀಡೆ ಮತ್ತು ದೈನಂದಿನ ಸಮಸ್ಯೆಗಳ ನಡುವೆ ಮಾರ್ಚ್ ತಿಂಗಳು ಜನರ ಬದುಕಿನಲ್ಲಿ ವಿಶಿಷ್ಟ ಅನುಭವಗಳನ್ನು ನೀಡುತ್ತಿದೆ. ಇಷ್ಟೆಲ್ಲಾ ಆದ್ರೂ ಮಾರ್ಚ್ ತಿಂಗಳು ಇನ್ನು ಮುಗಿದಿಲ್ಲ ಇನ್ನೇನು ಐಪಿಎಲ್ ಶುರುವಾಗೋದ್ರಲ್ಲಿದೆ, ಇನ್ನೂ 7 ದಿನ ಬಾಕಿ ಇದೆ ಆದ್ರೆ, “ಇನ್ನೇನು ಆಗಬಹುದು?” ಅನ್ನೋ ನಿಗೂಢತೆ ಬೇರೆ!