ಇತಿಹಾಸದ ಪುಟದತ್ತ ನಿರ್ಗಮಿಸುತ್ತಿರುವ 2025ನ್ನು ನೆನೆಯುವಾಗ ಮನಸ್ಸಿನಲ್ಲಿ ಸಂತಸ ಮೂಡುತ್ತದೆ. ಈ ವರ್ಷ ಲೇಖಕಿ ಬಾನು ಮುಷ್ತಾಕ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದು ಕನ್ನಡಿಗರ ಹೆಮ್ಮೆಗೆ ಮತ್ತೊಂದು ಗರಿ ಮುಡಿಸಿದರು. ಮೇರು ನಟ ಅನಂತ ನಾಗ್, ಖ್ಯಾತ ಪತ್ರಕರ್ತ ಡಾ. ಎ. ಸೂರ್ಯಪ್ರಕಾಶ್, ಪ್ರಸಿದ್ಧ ವಯೋಲಿನ್ ಕಲಾವಿದ ಡಾ. ಎಲ್. ಸುಬ್ರಹ್ಮಣ್ಯಂ ಮುಂತಾದ ಪ್ರತಿಭೆಗಳನ್ನು ಪದ್ಮ ಪುರಸ್ಕಾರಗಳು ಅರಸಿಬಂದವು. ಮಲಯಾಳಂ ಚಿತ್ರರಂಗದ ಶ್ರೇಷ್ಠ ನಟ ಮೋಹನ್ ಲಾಲ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದರು. ಪ್ರಖ್ಯಾತ ಹಿಂದಿ ಬರಹಗಾರ ವಿನೋದ್ಕುಮಾರ್ ಶುಕ್ಲಾ ಜ್ಞಾನಪೀಠ ಗೌರವಕ್ಕೆ ಪಾತ್ರರಾದರು. ಈ ವರ್ಷದ ಇನ್ನಷ್ಟು ವಿವರಗಳು ಮುಂದಿವೆ.
ಪ್ರಶಸ್ತಿ, ಪುರಸ್ಕಾರ, ಮನ್ನಣೆ, ಗೌರವಗಳು
ಹಂಗೇರಿ ಲೇಖಕನಿಗೆ ಸಾಹಿತ್ಯದ ನೊಬೆಲ್: ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೋರ್ಕೈ ಅವರು 2025ನೇ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದರು. ಅವರ `ಹೆರ್ಸ್ಟ್ 07769′ ಕಾದಂಬರಿ ಈ ಪ್ರಶಸ್ತಿ ಲಭಿಸಿದೆ. ಜರ್ಮನಿಯ ಸಣ್ಣ ಪಟ್ಟಣವೊಂದರಲ್ಲಿ ಸಂಭವಿಸಿದ ಸಾಮಾಜಿಕ ಅಶಾಂತಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ. 15 ಕಾದಂಬರಿಗಳನ್ನು ರಚಿಸಿರುವ ಅವರು, 2015ರ ಮ್ಯಾನ್ ಬೂಕರ್ ಪ್ರಶಸ್ತಿಯಲ್ಲದೆ ಅನೇಕ ಅಂತಾರಾಷ್ಟ್ರೀಯ ಮನ್ನಣೆಗಳಿಗೆ ಪಾತ್ರರಾಗಿದ್ದಾರೆ.
ಕನ್ನಡತಿಗೆ ಬೂಕರ್: ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದರು. ಅವರ ಕತೆಗಳ ಇಂಗ್ಲಿಷ್ ಅನುವಾದಿತ ಕೃತಿ `ಹಾರ್ಟ್ ಲ್ಯಾಂಪ್’ಗೆ ಈ ಪ್ರಶಸ್ತಿ ಲಭಿಸಿತು. ಅನುವಾದಕಿ ದೀಪಾ ಭಾಸ್ತಿ ಈ ಕತೆಗಳನ್ನು ಅನುವಾದಿಸಿದ್ದರು. ಕನ್ನಡದವರಿಗೆ ಈ ಪ್ರಶಸ್ತಿ ದೊರೆತಿರುವುದು ಇದೇ ಮೊದಲು.
ಹಿಂದಿ ಕವಿಗೆ ಜ್ಞಾನಪೀಠ: ಪ್ರಸಿದ್ಧ ಹಿಂದಿ ಕವಿ ಮತ್ತು ಬರಹಗಾರ ವಿನೋದಕುಮಾರ್ ಶುಕ್ಲಾ ಅವರಿಗೆ 59ನೇ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಅವರು ಛತ್ತೀಸ್‌ಗಢದಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಲೇಖಕ.
ಮೋಹನ್ ಲಾಲ್‌ಗೆ ಫಾಲ್ಕೆ ಗೌರವ: ಖ್ಯಾತ ಮಲಯಾಳಂ ಚಿತ್ರನಟ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು: ಚಾಮರಾಜನಗರದ ಕವಿ, ವಿಮರ್ಶಕ, ಅನುವಾದಕ ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಬರಹಗಳ ಪಚ್ಚೆಯ ಜಗುಲಿ' ಸಂಕಲನಕ್ಕೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಕೆ. ಶಿವಲಿಂಗಪ್ಪ ಹಂದಿಹಾಳು ಅವರನೋಟ್ ಬುಕ್’ ಮಕ್ಕಳ ಕಥೆಗಳ ಸಂಕಲನಕ್ಕೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಪ್ರಶಸ್ತಿ ಲಭಿಸಿತು. ಕನ್ನಡದ ಹಿರಿಯ ಲೇಖಕ, ಅನುವಾದಕ, ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ವಿದಿಶಾ ಪ್ರಹಸನ' ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಲಭಿಸಿತು. ಇದು ಮಹಾಕವಿ ಕಾಳಿದಾಸನಮಾಲವಿಕಾಗ್ನಿಮಿತ್ರಮ್’ ನಾಟಕದ ಕನ್ನಡ ರೂಪಾಂತರ.
ಕನ್ನಡಿಗರಿಗೆ ಪದ್ಮ ಪುರಸ್ಕಾರ
ಕರ್ನಾಟಕದ ಒಂಬತ್ತು ಮಂದಿ ಸಾಧಕರು 2025ರ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು.
ಪದ್ಮವಿಭೂಷಣ: ಡಾ. ಎಲ್. ಸುಬ್ರಹ್ಮಣ್ಯಂ (ಜಗತ್ಪ್ರಸಿದ್ಧ ವಯೋಲಿನ್ ಕಲಾವಿದ)
ಪದ್ಮಭೂಷಣ: ಅನಂತ ನಾಗ್ (ಕನ್ನಡ ಚಿತ್ರರಂಗದ ದಿಗ್ಗಜ), ಡಾ. ಎ. ಸೂರ್ಯಪ್ರಕಾಶ್ (ಹಿರಿಯ ಪತ್ರಕರ್ತರು)
ಪದ್ಮಶ್ರೀ: ವೆಂಕಪ್ಪ ಅಂಬಾಜಿ ಸುಗಟೇಕರ್ (ಜಾನಪದ ಕಲಾವಿದ), ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ (ತೊಗಲುಗೊಂಬೆ ಆಟದ ಕಲಾವಿದೆ), ಡಾ. ವಿಜಯಲಕ್ಷ್ಮಿದೇಶಮಾನೆ (ಕ್ಯಾನ್ಸರ್ ತಜ್ಞೆ), ರಿಕಿ ಕೇಜ್ (ವಿಖ್ಯಾತ ಸಂಗೀತ ನಿರ್ದೇಶಕ), ಹಾಸನ ರಘು (ಚಲನಚಿತ್ರ ನಿರ್ಮಾಪಕ), ಪ್ರಶಾಂತ್ ಪ್ರಕಾಶ್ (ಉದ್ಯಮಿ)
ಕನ್ನಡ-ಸಂಸ್ಕೃತಿ ಇಲಾಖೆಯ ಪ್ರಶಸ್ತಿಗಳು
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯಿಂದ 2024-25ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಯಿತು.
- ಬಿ. ಎ. ವಿವೇಕ ರೈ (ಪಂಪ ಪ್ರಶಸ್ತಿ)
- ವೈ. ಸಿ. ಭಾನುಮತಿ (ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ)
- ಬಸಪ್ಪ ಎಚ್. ಭಜಂತ್ರಿ (ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ)
- ಎಸ್. ಆರ್. ಗುಂಜಾಳ (ಬಸವ ರಾಷ್ಟ್ರೀಯ ಪುರಸ್ಕಾರ)
- ಎಂ. ರಾಮಮೂರ್ತಿ (ಜಕಣಾಚಾರಿ ಪ್ರಶಸ್ತಿ)
- ನಿಂಗಪ್ಪ ಭಜಂತ್ರಿ, ದೊಡ್ಡಗವಿಬಸಪ್ಪ (ಜಾನಪದಶ್ರೀ ಪ್ರಶಸ್ತಿ)
- ಅನಂತ ತೇರದಾಳ (ನಿಜಗುಣ ಪುರಂದರ ಪ್ರಶಸ್ತಿ)
- ಪಂಡಿತರತ್ನ ಎ. ಶಾಂತರಾಜ ಶಾಸ್ತ್ರಿ ಟ್ರಸ್ಟ್ (ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ)
- ಬೇಗಂ ಪರ್ವೀನ್ ಸುಲ್ತಾನಾ (ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ)
- ಪದ್ಮಿನಿ ರವಿ, ಬೆಂಗಳೂರು (ಶಾಂತಲಾ ನಾಟ್ಯ ಪ್ರಶಸ್ತಿ)
- ಮಲ್ಲಣ್ಣ (ಸಂತ ಶಿಶುನಾಳ ಷರೀಫ ಪ್ರಶಸ್ತಿ)
- ಎಂ. ಜೆ. ಕಮಲಾಕ್ಷಿ (ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ)
- ಕೆ. ನಾಗರತ್ನಮ್ಮ (ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ)
- ಕೆ. ರಾಜಕುಮಾರ್ (ಸಂಗೊಳ್ಳಿ ರಾಯಣ್ಣ ಪ್ರಶಸ್ತಿ)
- ಹೇಮಾ ಪಟ್ಟಣಶೆಟ್ಟಿ (ಅಕ್ಕಮಹಾದೇವಿ ಪ್ರಶಸ್ತಿ)
- ಸ. ರಘುನಾಥ (ಪ್ರೊ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ)
- ಜೆ. ಲೋಕೇಶ್ (ಬಿ.ವಿ. ಕಾರಂತ ಪ್ರಶಸ್ತಿ)
- ಎಲ್. ಹನುಮಂತಯ್ಯ (ಡಾ. ಸಿದ್ಧಲಿಂಗಯ್ಯ ಸಾಹಿತ್ಯ ಪ್ರಶಸ್ತಿ)
- ಎ. ವಿ. ಪ್ರಸನ್ನ (ಕುಮಾರವ್ಯಾಸ ಪ್ರಶಸ್ತಿ)
ಆಸ್ಥಾನ ಸಂಗೀತ ವಿದ್ವಾನ್ ಪುರಸ್ಕಾರ
ನಾಡಹಬ್ಬ ದಸರಾ ಸಂದರ್ಭದಲ್ಲಿ ನೀಡಲಾಗುವ `ಆಸ್ಥಾನ ಸಂಗೀತ ವಿದ್ವಾನ್’ ಪ್ರಶಸ್ತಿಗೆ ಈ ಬಾರಿ ಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು ಅದ್ಭುತ ಗಾಯನದ ಮೂಲಕ ದೇಶವಿದೇಶಗಳಲ್ಲಿ ಪ್ರಖ್ಯಾತರಾಗಿಸದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಶಸ್ತಿ
2025ನೇ ಸಾಲಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಐವರು ಅನುವಾದಕರಿಗೆ ಲಭಿಸಿತು. ವಿವಿಧ ಇಂಗ್ಲಿಷ್ ಕೃತಿಗಳನ್ನು ಕನ್ನಡ ಮತ್ತು ಕೊಂಕಣಿ ಭಾಷೆಗೆ ಅನುವಾದಿಸಿರುವ ಜೆ.ವಿ. ಕಾರ್ಲೊ, ಕನ್ನಡದಿಂದ ಇಂಗ್ಲಿಷಿಗೆ ಹಾಗೂ ಇಂಗ್ಲಿಷಿನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿರುವ ವನಮಾಲಾ ವಿಶ್ವನಾಥ್, ಜಾನಪದ ಮತ್ತು ಅನುವಾದ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ ಕೆ.ಆರ್. ಸಂಧ್ಯಾ ರೆಡ್ಡಿ, ಮರಾಠಿ ಹಾಗೂ ಮಲೆಯಾಳ ಭಾಷೆಯಿಂದ ಕನ್ನಡಕ್ಕೆ ಅನೇಕ ಮಹತ್ವದ ಕೃತಿಗಳನ್ನು ಅನುವಾದಿಸಿದ ವಿಠಲರಾವ್ ಟಿ. ಗಾಯಕ್ವಾಡ್ ಹಾಗೂ ಮರಾಠಿಯ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಜೆ. ಪಿ. ದೊಡ್ಮನಿ ಈ ಗೌರವ ಪ್ರಶಸ್ತಿಗೆ ಭಾಜನರಾದರು.
ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿ
ಭಾರತೀಯ ಭಾಷೆಗಳಲ್ಲಿನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಲೇಖಕರಿಗೆ ನೀಡಲಾಗುವ ರಾಷ್ಟçಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಪ್ರಸಿದ್ಧ ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್ ಆಯ್ಕೆಯಾಗಿದ್ದಾರೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಸೈಲ್ ಅವರಿಗೆ ಈ ಪ್ರಶಸ್ತಿಯನ್ನು ಕುವೆಂಪು ಜನ್ಮದಿದಂದು ಪ್ರದಾನ ಮಾಡಲಾಗುತ್ತದೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ನಾಟಕ ಅಕಾಡೆಮಿಯು ಕಲಾ ನಿರ್ದೇಶಕ ಶಶಿಧರ ಅಡಪ ಬಿ. ಅವರಿಗೆ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ಏಳು ಮಂದಿಗೆ ದತ್ತಿನಿಧಿ ಪ್ರಶಸ್ತಿ, 25 ಮಂದಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡಿದೆ. ಶಂಕರ ಭಟ್ (2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿ).
ದತ್ತಿನಿಧಿ ಪ್ರಶಸ್ತಿ
ಮಂಜು ಕೊಡಗು (ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ), ಕಿರಣ್ ರತ್ನಾಕರ ನಾಯ್ಕ (ಬಿ.ಆರ್. ಅರಿಶಿಣ ಕೋಡಿ ದತ್ತಿ ಪುರಸ್ಕಾರ) ಸಿ.ವಿ. ಲೋಕೇಶ (ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ), ಎಚ್.ಪಿ. ಈಶ್ವರಾಚಾರಿ (ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ), ದೊಡ್ಡಮನೆ ವೆಂಕಟೇಶ್ (ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ), ಪಿ.ವಿ. ಕೃಷ್ಣಪ್ಪ (ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ), ನಾಗೇಂದ್ರ ಪ್ರಸಾದ್ (ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ).
ವಾರ್ಷಿಕ ಪ್ರಶಸ್ತಿ
ಮಾಲತೇಶ ಬಡಿಗೇರ, ಜಿ. ಎನ್. ಮೋಹನ್, ರಘು. ಟಿ., ವೆಂಕಟಾಚಲ, ಮುರ್ತುಜಸಾಬ ಫಟ್ಟಿಗನೂರ, ಚೆನ್ನಕೇಶವಮೂರ್ತಿ ಎಂ., ಗೋಪಾಲ ಯಲ್ಲಪ್ಪ ಉಣಕಲ್, ಚಿಕ್ಕಪ್ಪಯ್ಯ, ದೇವರಾಜ ಹಲಗೇರಿ, ವೈ. ಎಸ್. ಸಿದ್ದರಾಮೇಗೌಡ, ಅರುಣ್ ಕುಮಾರ್ ಆರ್. ಟಿ., ರೋಹಿಣಿ ರಘುನಂದನ್, ರತ್ನ ಸಕಲೇಶಪುರ, ವಿ. ಎನ್. ಅಶ್ವಥ್, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಕೆ. ಆರ್. ಪೂರ್ಣೇಂದ್ರ ಶೇಖರ್, ಭೀಮನಗೌಡ ಬಿ. ಕಟಾವಿ, ಕೆ. ಮುರಳಿ, ಮುತ್ತುರಾಜ್, ಮಲ್ಲೇಶ್ ಬಿ. ಕೋನಾಳ, ಸುಗಂಧಿ ಉಮೇಶ್ ಕಲ್ಮಾಡಿ, ಮಹೇಶ್ ವಿ. ಪಾಟೀಲ, ಶಿವಪುತ್ರಪ್ಪ ಶಿವಸಿಂಪಿ, ಸದ್ಯೋಜಾತ ಶಾಸ್ತಿç ಹಿರೇಮಠ, ಉದಯ್ ಎಸ್. ಆರ್.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಯಕ್ಷಗಾನ ಅಕಾಡೆಮಿಯು ಐವರು ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಹತ್ತು ಸಾಧಕರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಮೂರು ಪುಸ್ತಕ ಬಹುಮಾನ ಪ್ರಶಸ್ತಿ ಹಾಗೂ ಓರ್ವ ಸಾಧಕರಿಗೆ ದತ್ತನಿಧಿ ಪ್ರಶಸ್ತಿ ನೀಡಿದೆ. ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಆಚಾರಿ ಬಳಕೂರು, ಡಿ. ಮನೋಹರ್ ಕುಮಾರ್, ಮುರಲಿ ಕಡೇಕಾರ್, ರಮೇಶ್ (ವಾರ್ಷಿಕ ಗೌರವ ಪ್ರಶಸ್ತಿ). ದೇವದಾಸ ರಾವ್ ಕೊಡ್ಲಿ (ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿ), ಅಶೋಕ ಹಾಸ್ಯಗಾರ – ದಶರೂಪಕಗಳ ದಶಾವತಾರ, ಕೆರೆಮನೆ ಶಿವಾನಂದ ಹೆಗಡೆ – ಆಟದ ಮೇಳ, ಮಣಿಪಾಲ್ ಯುನಿವರ್ಸಲ್ ಪ್ರೆಸ್ – ದೊಡ್ಡ ಸಾಮಗರ ನಾಲ್ಮೊಗ (ಪುಸ್ತಕ ಬಹುಮಾನ). ದಾಸನಡ್ಕ ರಾಮ ಕುಲಾಲ್, ರಾಜೀವ ಶೆಟ್ಟಿ ಹೊಸಂಗಡಿ, ದಾಸಪ್ಪಗೌಡ ಗೇರುಕಟ್ಟೆ, ಶ್ರೀನಿವಾಸ್ ಸಾಲ್ಯಾನ್, ಸದಾಶಿವ ಕುಲಾಲ್, ಬೆಳ್ಳಾರೆ ಮಂಜುನಾಥ ಭಟ್, ಕೇಶವ ಶಕ್ತಿನಗರ, ಲಕ್ಷ÷್ಮಣಗೌಡ ಬೆಳಾಲು, ಸಣ್ಣಮಲ್ಲಯ್ಯ, ಎ.ಜಿ. ನಾಗರಾಜು (ಯಕ್ಷಸಿರಿ ವಾರ್ಷಿಕ ಪ್ರಶಸ್ತಿ)
ರಾಜ್ಯೋತ್ಸವ ಪ್ರಶಸ್ತಿ
ಮೊದಲ ಬಾರಿಗೆ ಯಾರಿಂದಲೂ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಈ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನು ಒಳಗೊಂಡಿತ್ತು.
ಹೆಚ್. ಸಿದ್ದಯ್ಯ (ಆಡಳಿತ), ಎಸ್. ವಿ. ಹಿತ್ತಲಮನಿ, ಎಂ. ಸಿ. ರಂಗಸ್ವಾಮಿ (ಕೃಷಿ), ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್ (ಚಲನಚಿತ್ರ), ಬಸಪ್ಪ ಭರಮಪ್ಪ ಚೌಡ್ಕಿ, ಬಿ. ಟಾಕಪ್ಪ ಕಣ್ಣೂರು, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಹನುಮಂತಪ್ಪ ಮಾರಪ್ಪ ಚೀಳಂಗಿ, ಎಂ. ತೋಪಣ್ಣ, ಸೋಮಣ್ಣ ದುಂಡಪ್ಪ, ಸಿಂಧು ಗುಜರನ್, ಎಲ್. ಮಹದೇವಪ್ಪ ಉಡಿಗಾಲ (ಜಾನಪದ), ಕೆ. ರಾಮಮೂರ್ತಿ ರಾವ್ (ನೃತ್ಯ), ರಾಮೇಗೌಡ ಮಲ್ಲಿಕಾರ್ಜುನ ನಿಂಗಪ್ಪ (ಪರಿಸರ), ಗುಂಡೂರಾಜ್ (ಬಯಲಾಟ), ಕೆ. ಸುಬ್ರಹ್ಮಣ್ಯ, ಅಂಶಿ ಪ್ರಸನ್ನಕುಮಾರ್, ಬಿ. ಎಂ. ಹನೀಫ್, ಎಂ. ಸಿದ್ಧರಾಜು (ಮಾಧ್ಯಮ), ಕೋಟ ಸುರೇಶ ಬಂಗೇರ, ಐರಬೈಲ್ ಆನಂದ ಶೆಟ್ಟಿ, ಕೆ. ಪಿ. ಹೆಗಡೆ (ಯಕ್ಷಗಾನ), ರಾಮಯ್ಯ, ಏರ್ ಮಾರ್ಷಲ್ ಫಿಲಿಫ್ ರಾಜಕುಮಾರ್, ಆರ್. ವಿ. ನಾಡಗೌಡ (ವಿಜ್ಞಾನ-ತಂತ್ರಜ್ಞಾನ), ಆಲಮ್ಮ ಮಾರಣ್ಣ, ಜಯರಂಗನಾಥ್ (ವೈದ್ಯಕೀಯ), ಉಮೇಶ ಪಂಬದ, ರವೀಂದ್ರ ಕೋರಿಶೆಟ್ಟಿರ್, ಕೆ. ದಿನೇಶ್, ಶಾಂತರಾಜು, ಜಾಫರ್ ಮೊಹಿಯುದ್ದೀನ್, ಪೆನ್ನ ಓಬಳಯ್ಯ, ಶಾಂತಿಬಾಯಿ, ಪುಂಡಲೀಕ ಶಾಸ್ತ್ರಿ-ಬುಡಬುಡಕೆ (ಸಂಕೀರ್ಣ), ದೇವೇಂದ್ರಕುಮಾರ ಪತ್ತಾರ್, ಮಡಿವಾಳಯ್ಯ ಸಾಲಿ (ಸಂಗೀತ), ಸೂಲಗಿತ್ತಿ ಈರಮ್ಮ, ಫಕ್ಕೀರಿ, ಕೋರಿನ್ ಆಂಟೊನಿಯಟ್ ರಸ್ಕೀನಾ, ಎನ್. ಸೀತಾರಾಮ ಶೆಟ್ಟಿ, ಕೋಣಂದೂರು ಲಿಂಗಪ್ಪ (ಸಮಾಜಸೇವೆ), ಶೇಖರಗೌಡ ವಿ. ಮಾಲಿಪಾಟೀಲ್ (ಸಹಕಾರ), ರಾಜೇಂದ್ರ ಚೆನ್ನಿ, ತುಂಬಾಡಿ ರಾಮಯ್ಯ, ಆರ್. ಸುನಂದಮ್ಮ, ಎಚ್. ಎಲ್. ಪುಷ್ಪ, ರಹಮತ್ ತರೀಕೆರೆ, ಹ. ಮ. ಪೂಜಾರ (ಸಾಹಿತ್ಯ), ಜಕಾರಿಯ ಬಜಪೆ ಸೌದಿ, ಪಿ. ವಿ. ಶೆಟ್ಟಿ, (ಹೊರನಾಡು/ ಹೊರದೇಶ), ಎಲ್. ಬಿ. ಶೇಖ್ ಮಾಸ್ತರ್, ಹೆಚ್. ಎಂ. ಪರಮಶಿವಯ್ಯ, ಬಂಗಾರಪ್ಪ ಖುದಾನ್ಪುರ, ಮೈಮ್ ರಮೇಶ್, ಡಿ. ರತ್ನಮ್ಮ ದೇಸಾಯಿ (ರಂಗಭೂಮಿ), ಎಂ. ಆರ್. ಜಯರಾಮ್, ಎನ್. ಎಸ್. ರಾಮೇಗೌಡ, ಎಸ್. ಬಿ. ಹೊಸಮನಿ, ರಾಜ್ ನಾಗರಾಜು (ಶಿಕ್ಷಣ), ಆಶಿಶ್ ಕುಮಾರ್ ಬಲ್ಲಾಳ್, ಎಂ. ಯೋಗೇಂದ್ರ (ಕ್ರೀಡೆ), ಬಬಿನಾ ಎನ್. ಎಂ. (ಯೋಗ), ನ್ಯಾ. ಪಿ. ಬಿ. ಭಜಂತ್ರಿ (ನ್ಯಾಯಾಂಗ), ಬಸಣ್ಣ ಮೋನಪ್ಪ ಬಡಿಗೇರ, ನಾಗಲಿಂಗಪ್ಪ ಜಿ. ಗಂಗೂರ (ಶಿಲ್ಪಕಲೆ), ಬಿ. ಮಾರುತಿ (ಚಿತ್ರಕಲೆ), ಎಲ್. ಹೇಮಾಶೇಖರ್ (ಕರಕುಶಲ)























