ಕಾಲೆಳೆಯುವವರೇ ಜಾಸ್ತಿ ಇರುವಾಗ ಪಾದಗಳು ಸೇರುವುದಾದರೂ ಹೇಗೆ?

0
1

ನಾಯಕತ್ವವೂ ಇಲ್ಲ, ಒಗ್ಗಟ್ಟೂ ಇಲ್ಲ – ಜನ ಬೆಂಬಲವೂ ಇಲ್ಲ

ಬೆಂಗಳೂರು: ಪಾದಯಾತ್ರೆ ನಡೆಸಬೇಕೆಂದರೆ ಒಟ್ಟಿಗೆ ಹೆಜ್ಜೆ ಹಾಕುವ ಕಾಲುಗಳು ಬೇಕು. ಆದರೆ ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವವರೇ ಹೆಚ್ಚಾಗಿರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಜೆಪಿಯ“ಬಳ್ಳಾರಿ ಪಾದಯಾತ್ರೆ” ಪ್ರಹಸನದ ಪ್ರದರ್ಶನ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

‘ಪಾದಯಾತ್ರೆಗೆ ನಾಯಕತ್ವವೂ ಇಲ್ಲ, ಒಗ್ಗಟ್ಟೂ ಇಲ್ಲ’: ಬಿಜೆಪಿಯ ಪಾದಯಾತ್ರೆ ವಿಫಲವಾಗಲು ಹಲವಾರು ಕಾರಣಗಳಿವೆ ಎಂದು ಪ್ರಿಯಾಂಕ್ ಖರ್ಗೆ ವಿಶ್ಲೇಷಿಸಿದ್ದು, ಪಾದಯಾತ್ರೆಯನ್ನು ಮುನ್ನಡೆಸುವ ಸ್ಪಷ್ಟ ನಾಯಕತ್ವದ ಕೊರತೆ ಇದೆ. ಯಾರಾದರೂ ನಾಯಕನಾಗಿ ಹೊರಹೊಮ್ಮಿಬಿಡುವ ಅಸೂಯೆ ಹಾಗೂ ಬಣ ಜಗಳಗಳಿಂದ ಒಟ್ಟಿಗೆ ಹೆಜ್ಜೆ ಹಾಕಲು ಇಲ್ಲದ ಒಮ್ಮತ ಮೂಡಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಾದಯಾತ್ರೆಗೆ ಜನ ಬೆಂಬಲ ವ್ಯಕ್ತವಾಗದ ಹಿನ್ನಲೆಯಲ್ಲಿ ಈ ಎಲ್ಲ ಅಂಶಗಳನ್ನು ಅರಿತ ಬಿಜೆಪಿಯ ಪಾದಗಳು ಜಗನ್ನಾಥ ಭವನದಿಂದ ಹೊರಗೆ ಹೆಜ್ಜೆ ಇಡದೇ ನಿಂತಿವೆ ಎಂದು ವ್ಯಂಗ್ಯವಾಡಿದ್ದಾರೆ.

‘ಬಿಜೆಪಿಯ ಪಾದಯಾತ್ರೆ ರಾಜಕೀಯ ಜಿದ್ದಿಗೆ ಮಾತ್ರ’: ಬಿಜೆಪಿಯ ಪಾದಯಾತ್ರೆ ಜನ ಕೇಂದ್ರಿತ ವಿಚಾರಗಳಿಗಾಗಿ ಅಲ್ಲ, ಅದು ಕೇವಲ ರಾಜಕೀಯ ಜಿದ್ದಿಗಾಗಿ ನಡೆಸುವ ಯತ್ನ ಎಂದು ಆರೋಪಿಸಿದ ಅವರು, “ಹೀಗಿರುವಾಗ ಆ ಯಾತ್ರೆಗೆ ಜನ ಬೆಂಬಲ ಸಿಗುವುದು ಕನಸಿನ ಮಾತು” ಎಂದು ಹೇಳಿದ್ದಾರೆ.

ಇದನ್ನೂ ಓದಿ:  ದಾಂಡೇಲಿ: ಹಾರ್ನ್‌ಬಿಲ್ ಪಕ್ಷಿಗಳ ಹಬ್ಬಕ್ಕೆ ಶುಕ್ರವಾರ ಚಾಲನೆ

ಕಾಂಗ್ರೆಸ್ ಪಾದಯಾತ್ರೆಗಳ ಯಶಸ್ಸು ಸ್ಮರಣೆ: ಕಾಂಗ್ರೆಸ್ ಪಕ್ಷ ನಡೆಸಿದ ಪಾದಯಾತ್ರೆಗಳ ಬಗ್ಗೆ ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಅಭೂತಪೂರ್ವ ಜನಬೆಂಬಲದೊಂದಿಗೆ ನಡೆದ ಚಾರಿತ್ರಿಕ ಬಳ್ಳಾರಿ ಪಾದಯಾತ್ರೆ, ಜನ ಬಿಜೆಪಿಯನ್ನು ಕಿತ್ತೆಸೆಯುವಂತೆ ಮಾಡಿತ್ತು, ಮೇಕೆದಾಟು ಪಾದಯಾತ್ರೆ ಜನಹಿತಕ್ಕಾಗಿ ನಡೆಸಿದ್ದು, ಅದರ ಪರಿಣಾಮವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕಕ್ಕೆ ಯಶಸ್ಸು ದೊರಕಿದೆ, ಕೃಷ್ಣ ಮೇಲ್ದಂಡೆ ಯೋಜನೆಗಾಗಿ ನಡೆಸಿದ ಪಾದಯಾತ್ರೆ, ನಾಡು ಕಂಡ ಯಶಸ್ಸಿಗೆ ಕಾರಣವಾಗಿದೆ, ಎಂದು ವಿವರಿಸಿದ್ದಾರೆ.

‘ಜನರಿಗಾಗಿ ಹೋರಾಟವೇ ಕಾಂಗ್ರೆಸ್ ಪಾದಯಾತ್ರೆಗಳ ಶಕ್ತಿ’: ಕಾಂಗ್ರೆಸ್ ನಡೆಸಿದ ಎಲ್ಲಾ ಪಾದಯಾತ್ರೆಗಳಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದ್ದು, ಎತ್ತಿಕೊಂಡ ವಿಷಯಗಳಿಗೆ ಯಶಸ್ಸು ದೊರೆತಿರುವುದಕ್ಕೆ ಕಾರಣ, “ನಾವು ಪಾದಯಾತ್ರೆಗಳನ್ನು ಜನರಿಗಾಗಿ ನಡೆಸಿದ್ದೇವೆ, ರಾಜಕೀಯ ಮೇಲಾಟಕ್ಕಾಗಿ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ

ಬಿಜೆಪಿ ವಿರುದ್ಧ ತೀವ್ರ ಟೀಕೆ: “ಬಿಜೆಪಿಗೆ ಎಂದಿಗೂ ಕಾಂಗ್ರೆಸ್ಸಿನಂತೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಕಾಂಗ್ರೆಸ್ಸಿನಂತೆ ಜನಪರ ಚಿಂತನೆಗಳೇ ಇಲ್ಲ” ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.

Previous articleದಾಂಡೇಲಿ: ಹಾರ್ನ್‌ಬಿಲ್ ಪಕ್ಷಿಗಳ ಹಬ್ಬಕ್ಕೆ ಶುಕ್ರವಾರ ಚಾಲನೆ