ಬೆಂಗಳೂರು: ರಾಜ್ಯದಲ್ಲಿ ಇನ್ನೂ ನಾಯಕತ್ವ ಬದಲಾವಣೆಯ ಕೂಗು ಬೂದಿ ಮುಚ್ಚಿದ ಕೆಂಡದಂತಿದೆ. ಸಿಎಂ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಂಗಳವಾರ ನಾಯಕತ್ವ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಫೆಬ್ರವರಿಯಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ಇವೆ. ಅಷ್ಟರೊಳಗೆ ಹೈಕಮಾಂಡ್ ನಿರ್ಧರಿಸಬೇಕು. ಯಾರಾದರು ಒಬ್ಬರು ಬಜೆಟ್ ಮಂಡನೆ ಮಾಡಬೇಕಲ್ಲ ಎಂದರು.
ದೆಹಲಿಯಲ್ಲಿ ಪರಂ ಸಿಎಂ ಮಾಡಿ ಎಂಬ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿ, ಪರಮೇಶ್ವರ್ ಸಿಎಂ ಮಾಡಿ ಅಂತ ಹೇಳುತ್ತಾರೆ. ಬಹಳ ಪ್ರೀತಿಯಿಂದ ಅವರು ಹೇಳುತ್ತಾರೆ. ಆ ರೀತಿ ಹೇಳಬೇಡಿ ಅಂತ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಹೈಕಮಾಂಡ್ ನಾಯಕರಿಗೆ ಪ್ರತಿಯೊಂದು ಮಾಹಿತಿಯೂ ತಿಳಿದಿದೆ. ಅವರು ಜನರಲ್ ಸೆಕ್ರೆಟರಿ ಮೂಲಕ ಮಾಹಿತಿ ತೆಗೆದುಕೊಳ್ಳುತ್ತಾರೆ. ಅವರದ್ದೇ ಆದ ರೀತಿಯಲ್ಲಿ ಮಾಹಿತಿ ಸಂಗ್ರಹಣೆ ಮಾಡುತ್ತಾರೆ. ಯಾವ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕು ಅಂತ ಎಂದರು.









