Home ಸುದ್ದಿ ರಾಜ್ಯ ರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು ಎಂ.ಬಿ. ಪಾಟೀಲ ಶಿಫಾರಸು

ರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು ಎಂ.ಬಿ. ಪಾಟೀಲ ಶಿಫಾರಸು

0

ಬೆಂಗಳೂರು: ಕರ್ನಾಟಕದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಿಗೆ ಸ್ಥಳೀಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಹೊಸ ಹೆಸರುಗಳನ್ನು ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಈ ನಾಮಕರಣದ ಶಿಫಾರಸು ಮಾಡಿದ್ದಾರೆ. ಈ ಸಂಬಂಧವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಪಾಟೀಲ ಅವರು ನೀಡಿರುವ ಶಿಫಾರಸು ಪ್ರಕಾರ —

ವಿಜಯಪುರ ರೈಲು ನಿಲ್ದಾಣಕ್ಕೆ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ

ಬೆಳಗಾವಿ ರೈಲು ನಿಲ್ದಾಣಕ್ಕೆ: ಶ್ರೀ ಬಸವ ಮಹಾಸ್ವಾಮೀಜಿ ರೈಲು ನಿಲ್ದಾಣ

ಬೀದರ್ ರೈಲು ನಿಲ್ದಾಣಕ್ಕೆ: ಶ್ರೀ ಚನ್ನಬಸವ ಪಟ್ಟದ್ದೇವರು ರೈಲು ನಿಲ್ದಾಣ

ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ರೈಲು ನಿಲ್ದಾಣಕ್ಕೆ: ಭಾಯಗಡ ರೈಲು ನಿಲ್ದಾಣ

ಈ ನಿಲ್ದಾಣಗಳು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರದಿಂದ ಪ್ರಸ್ತಾಪಿತ ನಾಮಕರಣಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮೋದನೆ ಅಗತ್ಯವಿದೆ.

“ಕರ್ನಾಟಕದ ಈ ಭಾಗಗಳ ಸಾಂಸ್ಕೃತಿಕ ಇತಿಹಾಸ ಮತ್ತು ಸಂತರ ತಾತ್ವಿಕ ಕೊಡುಗೆ ಅಪಾರವಾಗಿದೆ. ಈ ನಿಲ್ದಾಣಗಳಿಗೆ ಅವರ ಹೆಸರನ್ನು ನೀಡುವುದು ಸಮಾಜದ ಕೃತಜ್ಞತೆ ವ್ಯಕ್ತಪಡಿಸುವ ಹೆಜ್ಜೆಯಾಗುತ್ತದೆ,” ಎಂದು ಹೇಳಿದ್ದಾರೆ.

ಪತ್ರದಲ್ಲಿ ಸಚಿವರು ಗೃಹ ಸಚಿವಾಲಯವನ್ನು ವಿನಂತಿಸಿ, “ಈ ಶಿಫಾರಸಿಗೆ ತ್ವರಿತ ಅನುಮೋದನೆ ನೀಡಿ, ಮರುನಾಮಕರಣವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು” ಕೋರಿದ್ದಾರೆ.

ಈ ಶಿಫಾರಸು ಕುರಿತ ಮಾಹಿತಿ ಸಚಿವ ಎಂ.ಬಿ. ಪಾಟೀಲ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ಬೆಂಬಲ ಪಡೆಯುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version