Home Advertisement
Home ಸುದ್ದಿ ರಾಜ್ಯ ದ್ವಿತೀಯ PUC ಫಲಿತಾಂಶ ಪ್ರಕಟ: ಆನ್‌ಲೈನ್‌ನಲ್ಲಿ ಚೆಕ್ ಮಾಡಿ

ದ್ವಿತೀಯ PUC ಫಲಿತಾಂಶ ಪ್ರಕಟ: ಆನ್‌ಲೈನ್‌ನಲ್ಲಿ ಚೆಕ್ ಮಾಡಿ

0
162

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಇಂದು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಘೋಷಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದಲೇ ಫಲಿತಾಂಶವನ್ನು https://karresults.nic.in ವೆಬ್‌ಸೈಟ್‌ನಲ್ಲಿ ಲಭ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಬಳಸಿ ಅಂಕಪಟ್ಟಿಯನ್ನು ಪರಿಶೀಲಿಸಬಹುದು.

ಫಲಿತಾಂಶ ನೋಡುವ ವಿಧಾನ : ವಿದ್ಯಾರ್ಥಿಗಳು ಈ ಕ್ರಮಗಳನ್ನು ಅನುಸರಿಸಿ ಫಲಿತಾಂಶ ವೀಕ್ಷಿಸಬಹುದು. karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ನಂತರ “II PUC Exam 2026 Result” ಲಿಂಕ್ ಕ್ಲಿಕ್ ಮಾಡಿ, ನೋಂದಣಿ ಸಂಖ್ಯೆ (Registration Number) ನಮೂದಿಸಿ ನಿಮ್ಮ ಸ್ಟ್ರೀಮ್ (Arts/Commerce/Science) ಆಯ್ಕೆ ಮಾಡಿ ‘Submit’ ಬಟನ್ ಕ್ಲಿಕ್ ಮಾಡಿದ ತಕ್ಷಣ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ

ಸರ್ವರ್ ಸಮಸ್ಯೆ ಎದುರಾದಲ್ಲಿ, ಡಿಜಿಲಾಕರ್ ಹಾಗೂ ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೊತೆಗೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಫಲಿತಾಂಶ ಮಾಹಿತಿ ರವಾನೆಯಾಗಲಿದೆ.

ಡಿಜಿಟಲ್ ಅಂಕಪಟ್ಟಿ: NAD-ಡಿಜಿಲಾಕರ್ ವ್ಯವಸ್ಥೆ: ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾದ ದಿನವೇ ಅಂಕಪಟ್ಟಿಯನ್ನು ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ (NAD) ಮತ್ತು ಡಿಜಿಲಾಕರ್ ಮೂಲಕ ಲಭ್ಯಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಡಿಜಿಟಲ್ ಅಂಕಪಟ್ಟಿಯನ್ನು ಅಧಿಕೃತ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಉನ್ನತ ವ್ಯಾಸಂಗ ಮತ್ತು ಉದ್ಯೋಗ ಅರ್ಜಿಗಳಲ್ಲಿ ಬಳಸಬಹುದು ಹಾಗೂ 24×7 ಲಭ್ಯತೆ ಮತ್ತು ಸುರಕ್ಷಿತ ಡೇಟಾ ಸಂಗ್ರಹಣೆ ಇದ್ದು ಇದರಿಂದ ವಿದ್ಯಾರ್ಥಿಗಳಿಗೆ ತ್ವರಿತ ಸೇವೆ, ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ಕಡಿತ ಸಾಧ್ಯವಾಗಲಿದೆ.

ಭೌತಿಕ ಅಂಕಪಟ್ಟಿಗೆ ಅಂತ್ಯ? : 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಭೌತಿಕ ಅಂಕಪಟ್ಟಿ ನೀಡಲಾಗುತ್ತದೆ. ಆದರೆ 2026-27ರಿಂದ ಭೌತಿಕ ಪ್ರತಿಗಳನ್ನು ನೀಡುವ ಪದ್ಧತಿಯನ್ನು ಸ್ಥಗಿತಗೊಳಿಸಿ, APAR ID ಮೂಲಕ NAD-ಡಿಜಿಲಾಕರ್‌ನಲ್ಲಿ ಮಾತ್ರ ಅಂಕಪಟ್ಟಿ ಲಭ್ಯವಾಗಲಿದೆ.

ಸಂಜೆ ಟಾಪರ್‌ಗಳ ಪಟ್ಟಿ ಪ್ರಕಟ: ಸಂಜೆ ನಡೆಯುವ ಸುದ್ದಿಗೋಷ್ಠಿಯಲ್ಲಿ ಟಾಪರ್‌ಗಳ ಪಟ್ಟಿ ಹಾಗೂ ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಮತ್ತು ಒಟ್ಟು ಫಲಿತಾಂಶ ವಿಶ್ಲೇಷಣೆ ಪ್ರಕಟವಾಗಲಿದೆ.

ವಿದ್ಯಾರ್ಥಿಗಳಿಗೆ ಅನುಕೂಲ : ಈ ಹೊಸ ವ್ಯವಸ್ಥೆಯಿಂದ ಎಲ್ಲ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರುತ್ತವೆ. ಯಾವಾಗ ಬೇಕಾದರೂ ಡೌನ್‌ಲೋಡ್ ಮಾಡಬಹುದು. ಸರ್ಕಾರಿ ಸಂಸ್ಥೆಗಳು ಅಧಿಕೃತ ದಾಖಲೆ ಎಂದು ಒಪ್ಪಿಕೊಳ್ಳುತ್ತವೆ

ಅವಕಾಶ: ಮೊದಲ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದ್ದರೆ ಅಥವಾ ಅನುತ್ತೀರ್ಣರಾಗಿದ್ದರೆ ಬೇಸರಪಡುವ ಅಗತ್ಯವಿಲ್ಲ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ವಿದ್ಯಾರ್ಥಿಗಳಿಗೆ ಅಂಕ ಸುಧಾರಿಸಿಕೊಳ್ಳಲು ಉತ್ತಮ ಅವಕಾಶ ನೀಡಿದೆ. ನೀವು ಯಾವುದಾದರೂ ವಿಷಯದಲ್ಲಿ ಫೇಲ್ ಆಗಿದ್ದರೆ ಅಥವಾ ಪಾಸ್ ಆಗಿದ್ದರೂ ಅಂಕ ಕಡಿಮೆ ಬಂದಿದೆ ಎನಿಸಿದರೆ ‘ಪರೀಕ್ಷೆ-೨’ ಬರೆಯಬಹುದು.