ಕರ್ನಾಟಕ: JFEಯಿಂದ ರೂ. 400 ಕೋಟಿ ಹೂಡಿಕೆ

0
45

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ವಾಹನಗಳ (EV) ಉತ್ಪಾದನೆ ಮತ್ತು ಅದರ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ ಜಪಾನ್ ಮೂಲದ ಪ್ರಮುಖ ಕಂಪನಿ ಜೆಎಫ್‌ಇ ಶೋಜಿ (JFE Shoji Corporation) ತನ್ನ ಹೂಡಿಕೆಯನ್ನು ಕರ್ನಾಟಕದತ್ತ ಕೇಂದ್ರೀಕರಿಸಿದೆ. ₹400 ಕೋಟಿ ಹೂಡಿಕೆ ಮೂಲಕ BEVs/EVs ಗಾಗಿ ಅಗತ್ಯವಾದ ಮೋಟಾರ್ ಕೋರ್ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸಲು ಸಂಸ್ಥೆ ಬದ್ಧತೆಯನ್ನು ವ್ಯಕ್ತಪಡಿಸಿದೆ.

ಸಚಿವ ಎಂ. ಬಿ. ಪಾಟೀಲ್ ಅವರು ಜೆಎಫ್‌ಇ ಶೋಜಿ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಈ ಹೂಡಿಕೆ ಮೂಲಕ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ರಾಜ್ಯದ ಇವಿ ಸರಪಳಿಯ ಬಲವರ್ಧನೆಗೆ ಮಹತ್ತರ ಕೊಡುಗೆ ನೀಡಲಿದೆ. ಯೋಜನೆಗೆ ಸಂಬಂಧಿಸಿದಂತೆ ಭೂಮಿಯ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಮತ್ತು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ದೊರೆಯಲಿದೆ ಎಂದಿದ್ದಾರೆ.

ಹುಬ್ಬಳ್ಳಿಯ NGEF ಘಟಕಕ್ಕೆ ಪುನರುಜ್ಜೀವ: ಇದೆ ವೇಳೆ, ಹುಬ್ಬಳ್ಳಿಯ NGEF ಘಟಕ ಪುನರುಜ್ಜೀವ ಕುರಿತ ಚರ್ಚೆಯೂ ನಡೆದಿದ್ದು, ಪವರ್ ಟ್ರಾನ್ಸ್‌ಫಾರ್ಮರ್ ಕ್ಷೇತ್ರದಲ್ಲಿ ಜೆಎಫ್‌ಇ ಶೋಜಿಯ ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವ ಬಗ್ಗೆಯೂ ಒಲವು ತೋರಿಸಲಾಗಿದೆ.ಮುಂದಿನ ಹಂತಗಳಲ್ಲಿ ನಾವು ಹೆಚ್ಚಿನ ಚರ್ಚೆಗಳನ್ನು ನಡೆಸಲು ಜೆಎಫ್‌ಇ ಶೋಜಿ ಸಂಸ್ಥೆಯ ಪ್ರತಿನಿಧಿಗಳನ್ನು ಹುಬ್ಬಳ್ಳಿ ಘಟಕಕ್ಕೆ ಆಹ್ವಾನಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

Previous articleಬೆಂಗಳೂರು-ವಿಜಯಪುರ ದಸರಾ ವಿಶೇಷ ರೈಲು, ವೇಳಾಪಟ್ಟಿ
Next articleಹುಬ್ಬಳ್ಳಿ – ಬೆಂಗಳೂರು ವಿಶೇಷ ರೈಲು ಚಾಮರಾಜನಗರಕ್ಕೆ ವಿಸ್ತರಣೆ: ವಿವರಗಳು

LEAVE A REPLY

Please enter your comment!
Please enter your name here