GST ಸ್ಲ್ಯಾಬ್‌ಗಳ ಪರಿಷ್ಕರಣೆ: ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿ

0
3

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಎರಡು ದಿನಗಳ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆ ಬುಧವಾರ ಆರಂಭವಾಗಿದ್ದು ಪ್ರತಿಶತ 5 ಮತ್ತು 18 ತೆರಿಗೆ ದರಗಳಿರುವ ಎರಡು ಹಂತಗಳ ತೆರಿಗೆ ಪದ್ಧತಿಗೆ ಸಭೆ ಅನುಮೋದನೆ ನೀಡಿದೆ. ಇದೇ ವೇಳೆ ಐಶಾರಾಮಿ ವಸ್ತುಗಳಿಗೆ ಶೇ. 40ರ ಹೊಸ ದರಗಳನ್ನು ಪರಿಚಯಿಸಿದೆ. ಈ ಬದಲಾವಣೆಗೆಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.

ಬುಧವಾರದ ಶೇ. 12 ಹಾಗೂ 28ರ ತೆರಿಗೆ ದರಗಳನ್ನು ರದ್ದು ಮಾಡಲಾಗಿದೆ. 2,500 ರೂ. ಬೆಲೆಯ ಪಾದರಕ್ಷೆ ಹಾಗೂ ಉಡುಪುಗಳ ಮೇಲಿನ ತೆರಿಗೆ ದರವನ್ನು ಶೇ. 5ಕ್ಕೆ ಇಳಿಸಲು ಈ ಮಂಡಳಿ ಒಪ್ಪಿಗೆ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸದ್ಯ ಒಂದು ಸಾವಿರ ರೂ. ವರೆಗಿನ ಈ ಎರಡು ವಸ್ತುಗಳಿಗೆ ಶೇ. 5ರ ದರದ ತೆರಿಗೆ ವಿಧಿಸಲಾಗುತ್ತಿದೆ. 2,500ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳಿಗೆ ಶೇ. 18ರ ತೆರಿಗೆ ದರ ವಿಧಿಸುವ ಸಾಧ್ಯತೆ ಇದೆ.

ತೆರಿಗೆ ದರಗಳ ಪರಿಷ್ಕರಣೆಯಿಂದಾಗಿ ಐಷಾರಾಮಿ ವಸ್ತುಗಳು, ದುಬಾರಿ ಕಾರುಗಳು, ಮದ್ಯ, ಜೂಜಾಟ, ತಂಪು ಪಾನೀಯ, ಮಾದಕವಸ್ತುಗಳು, ಜಂಕ್‌ಫುಡ್, ಕಾಫಿ, ಸಕ್ಕರೆ, ತಂಬಾಕು ವಸ್ತುಗಳ ಬೆಲೆ ದುಬಾರಿಯಾಗಬಹುದು.

ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ: ಕಾರುಗಳ ಮೇಲಿನ ಜಿಎಸ್‌ಟಿ ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದ್ದು, 300 ಸಿಸಿ ಅಥವಾ ಅದಕ್ಕಿಂತ ಕಡಿಮೆ ಇರುವ ಸಣ್ಣ ಕಾರುಗಳು, ಮೋಟಾರ್ ಸೈಕಲ್‌, ಬಸ್‌, ಟ್ರಕ್‌ ಮತ್ತು ಆಂಬ್ಯುಲೆನ್ಸ್‌ಗಳು ಸೇರಿದಂತೆ ಎಲ್ಲ ಆಟೋ ಬಿಡಿಭಾಗಗಳ ಮೇಲೆ 18 ಪ್ರತಿಶತದಷ್ಟು ಏಕರೂಪದ ದರ ವಿಧಿಸಲಾಗಿದೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ವಾಹನಗಳ ಬೆಲೆಯಲ್ಲಿ ಭಾರೀ ಕಡಿತವಾಗಲಿದೆ.

ಇನ್ನು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ನನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ನಮ್ಮ ಬಯಕೆಯ ಬಗ್ಗೆ ನಾನು ಮಾತನಾಡಿದ್ದೆ.” ಎಂದಿರುವ ಅವರು, “ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಿಎಸ್‌ಟಿ ದರಗಳ ಸಮಗ್ರ ಮತ್ತು ತರ್ಕಬದ್ಧ ಸುಧಾರಣೆಗೆ ಕೇಂದ್ರ ಸರ್ಕಾರವು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ” ಎಂದು ತಿಳಿಸಿದ್ದಾರೆ.

ʼಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ @GST_ಕೌನ್ಸಿಲ್, ಕೇಂದ್ರ ಸರ್ಕಾರವು ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ, ಇದು ಸಾಮಾನ್ಯ ಜನರು, ರೈತರು, ಎಂಎಸ್‌ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.

“ಈ ಸಮಗ್ರ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಸುಧಾರಿಸುತ್ತದೆ ಮತ್ತು ಎಲ್ಲರಿಗೂ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ವ್ಯಾಪಾರ ಮಾಡುವ ಸುಲಭತೆಯನ್ನು ಖಚಿತಪಡಿಸುತ್ತದೆ.” ಎಂದು ಮೋದಿ ಬರೆದುಕೊಂಡಿದ್ದಾರೆ.

Previous articleಇಫ್ತಾರ್‌ಕೂಟಕ್ಕೆ ಸಿದ್ದರಾಮಯ್ಯ ಟೋಪಿ ಧರಿಸಿ ಹೋಗುವುದಿಲ್ಲವೇ? ಸಿಎಂಗೆ ಜೋಶಿ ಪ್ರಶ್ನೆ

LEAVE A REPLY

Please enter your comment!
Please enter your name here