ಬೀದಿ ನಾಯಿ ಕಡಿತ ಪ್ರಕರಣ: ದೇಶದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

1
152

ಬೀದಿ ನಾಯಿಗಳ ಕುರಿತು ಸುಪ್ರೀಂಕೋರ್ಟ್ ನೀಡಿದ ನಿರ್ದೇಶದನ ಬಳಿಕ ಈ ಕುರಿತು ಚರ್ಚೆಗಳು ಆರಂಭವಾಗಿದೆ. ಭಾರತದಲ್ಲಿ ನಾಯಿ ಕಡಿತ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ದೆಹಲಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಹಾಕಿ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿಂದೆ, ಸಾರ್ವಜನಿಕರಿಗೆ ಉಂಟಗುತ್ತಿರುವ ತೊಂದರೆಯೂ ಅಡಿಗೆ. ಈ ತೀರ್ಪಿಗೆ ಪ್ರಾಣಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಜನರಿಗೆ ಆಗುತ್ತಿರುವ ತೊಂದರೆಯನ್ನೂ ಪರಿಗಣಿಸುವ ಅಗತ್ಯ ಇದೆ. 2024ರಲ್ಲಿಯೇ 37.17 ಲಕ್ಷ ಬೀದಿ ನಾಯಿಗಳು ಕಚ್ಚಿದ ಕೇಸ್‌ಗಳು ದಾಖಲಾಗಿವೆ. ಹಾಗೆಯೇ ಪ್ರತಿ ದಿನ 10,000ಕ್ಕಿಂತ ಹೆಚ್ಚು ನಾಯಿ ಕಚ್ಚಿದ ಕೇಸ್‌ಗಳು ದಾಖಲಾಗುತ್ತಿವೆ. ನಾಯಿ ಕಚ್ಚಿದ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲಿಯೇ 4ನೇ ಸ್ಥಾನದಲ್ಲಿದೆ. ರೇಬಿಸ್‌ನಿಂದ ಸಾಯುವವರ ಸಂಖ್ಯೆ ದೇಶದಲ್ಲಿ ಪ್ರತಿವರ್ಷ 18 ರಿಂದ 20 ಸಾವಿರ ಇದೆ ಎನ್ನುವುದು ಈ ಸಮಸ್ಯೆಯ ಗಂಭೀರತೆ ಹೇಳುತ್ತದೆ.

ಭಾರತದಲ್ಲಿ ಬೀದಿ ನಾಯಿ ಕಡಿತದ ಕುರಿತು ಅಂಕಿ ಸಂಖ್ಯೆಗಳ ವರದಿ ಪ್ರಕಟವಾಗಿದೆ. ಈ ವರದಿಯನ್ನು ನೋಡಿದರೆ ಸಮಸ್ಯೆಯ ಗಂಭೀರತೆ ಜನರಿಗೆ ಅರ್ಥವಾಗುತ್ತದೆ. ಈ ವರದಿಯ ಸಮಗ್ರ ಚಿತ್ರಣ ಇಲ್ಲಿದೆ.

ಈ ವರ್ಷದಲ್ಲಿ 26,334 ಬೀದಿ ನಾಯಿ ಕಚ್ಚಿದ ಕೇಸ್‌ಗಳು ದಾಖಲಾಗಿವೆ. ಇದರಲ್ಲಿ 9,920 ಕೇಸ್‌ಗಳು ದೆಹಲಿ ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ ದಾಖಲಾಗಿವೆ. 15,010 ಕೇಸ್‌ಗಳು ರೇಬಿಸ್ ವಿರೋಧಿ ಲಸಿಕಾ ಕೇಂದ್ರಗಳಲ್ಲಿ ವರದಿಯಾಗಿವೆ. ಜುಲೈ 31ರ ಹೊತ್ತಿಗೆ, ದೆಹಲಿಯಲ್ಲಿ 49 ರೇಬಿಸ್ ಪ್ರಕರಣಗಳು ವರದಿಯಾಗಿವೆ. 2024ರಲ್ಲಿ ದೆಹಲಿಯಲ್ಲಿ 68,090 ಬೀದಿ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ ಎನ್ನುತ್ತದೆ ವರದಿ.

ಭಾರತದಲ್ಲಿ ರೇಬಿಸ್‌ನಿಂದ ಸಾವು: 18 ಸಾವಿರದಿಂದ 20 ಸಾವಿರದ ತನಕ ಭಾರತದಲ್ಲಿ ಪ್ರತಿವರ್ಷ ರೇಬಿಸ್‌ನಿಂದ ಜನರು ಸಾಯುತ್ತಾರೆ. ಅದರಲ್ಲಿ ಹೆಚ್ಚಿನವರು 15 ವರ್ಷದೊಳಗಿನ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ. 2024ರಲ್ಲಿ ದೇಶದಲ್ಲಿ ಬೀದಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ 37.17 ಲಕ್ಷ ಆಗಿದೆ. ದೇಶದಲ್ಲಿ ಬೀದಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಪ್ರತಿ ದಿನ ಸರಾಸರಿ 10 ಸಾವಿರದಷ್ಟಾಗಿದೆ.

ನಾಯಿ ಕಡಿದ ತಕ್ಷಣ ಪೋಸ್ಟ್-ಎಕ್ಸ್ಪೋಸರ್ ಪ್ರೊಫಿ ಲ್ಯಾಕ್ಸಿಸ್ (ಪಿಯಿಪಿ) ಪಡೆದರೆ ರೇಬಿಸ್ ಅನ್ನು ಶೇ 100ರಷ್ಟು ತಡೆಗಟ್ಟಬಹುದು. ಆದರೆ ಭಾರತದಲ್ಲಿ ಜನರು ವ್ಯಾಕ್ಸಿನೇಷನ್ ಸರಿಯಾಗಿ ಪಡೆಯುತ್ತಿಲ್ಲ. ಒಮ್ಮೆ ರೇಬಿಸ್ ಬಂದಲ್ಲಿ ಅದು ವಾಸಿಯಾಗುವುದಿಲ್ಲ. ಇದು ಸಾವಿಗೂ ಕಾರಣವಾಗಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯವಾಗಿದೆ.

ರಾಜ್ಯವಾರು ಪ್ರಕರಣಗಳು: ಬೀದಿ ನಾಯಿ ಕಚ್ಚಿದ ಪ್ರಕರಣದಲ್ಲಿ ರಾಜ್ಯವಾರು ಅಂಕಿ ಅಂಶಗಳನ್ನು ನೋಡಿದಾಗ ಮಹಾರಾಷ್ಟ್ರದಲ್ಲಿ 13.5 ಲಕ್ಷ ಪ್ರಕರಣ ದಾಖಲಾಗಿದ್ದು ರಾಜ್ಯ ಮೊದಲ ಸ್ಥಾನದಲ್ಲಿದೆ. ತಮಿಳನಾಡು 12.9 ಲಕ್ಷ, ಗುಜರಾತ್ 8.4 ಲಕ್ಷ, ಕರ್ನಾಟಕ 7.6 ಲಕ್ಷ, ಆಂಧ್ರ ಪ್ರದೇಶ 6.5 ಲಕ್ಷ ಹಾಗೂ ಉತ್ತರ ಪ್ರದೇಶ 5.1 ಲಕ್ಷ ಪ್ರಕರಣಗಳು ದಾಖಲಾಗಿವೆ.

ಉತ್ತರ ಪ್ರದೇಶದಲ್ಲಿ 20.6 ಲಕ್ಷ ಬೀದಿ ನಾಯಿಗಳಿವೆ. ಈ ಮೂಲಕ ಅತಿ ಹೆಚ್ಚು ಬೀದಿನಾಯಿಗಳಿಗೆ ರಾಜ್ಯಗಳಪಟ್ಟಿಯಲ್ಲಿ ಯುಪಿ ಮೊದಲ ಸ್ಥಾನದಲ್ಲಿದೆ. ಒಡಿಸ್ಸಾ 17.3 ಲಕ್ಷ, ಮಹಾರಾಷ್ಟ್ರ 12.8 ಲಕ್ಷ, ರಾಜಸ್ಥಾನ 12.8 ಲಕ್ಷ ಹಾಗೂ ಕರ್ನಾಟಕದಲ್ಲಿ 11.4 ಲಕ್ಷ ಬೀದಿ ನಾಯಿಗಳಿವೆ.

Previous articleDarshan Bail News: ಜಾಮೀನು ರದ್ದು ಬೆನ್ನಲ್ಲೇ ಪವಿತ್ರಾ ಗೌಡ ಅರೆಸ್ಟ್
Next articleಬೆಂಗಳೂರು: ಬೆಳಗಾವಿ-ದೆಹಲಿ, ಬೆಳಗಾವಿ-ಬೆಂಗಳೂರು ಪ್ರತಿದಿನದ ವಿಮಾನ, ವೇಳಾಪಟ್ಟಿ

1 COMMENT

LEAVE A REPLY

Please enter your comment!
Please enter your name here