ಹಿರಿಯ ರಂಗ ಕಲಾವಿದೆ ಹನುಮಕ್ಕ ನಿಧನ

0
182

ಕೊಪ್ಪಳ: ಮರಿಯಮ್ಮನಹಳ್ಳಿ ಪಟ್ಟಣದ ಹಿರಿಯ ರಂಗ ಕಲಾವಿದೆ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ. ಹನುಮಕ್ಕ (58) ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ಕೊಪ್ಪಳದಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯ ಮತ್ತು ಕೊನೆಯ ಕ್ಷಣಗಳು: ಕಳೆದ ಒಂದು ವರ್ಷದಿಂದ ಮಿದುಳಿನ ಗಡ್ಡೆ ಕಾಯಿಲೆಯಿಂದ ಬಳಲುತ್ತಿದ್ದ ಅವರು. ಕಳೆದ ಎರಡು ತಿಂಗಳಿಂದ ಅವರು ಕೋಮಾವಸ್ಥೆಯಲ್ಲಿದ್ದರು, ಸಹೋದರಿಯರ ಜೊತೆಯಲ್ಲಿದ್ದ ಅವರು ವೈದ್ಯಕೀಯ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಜೀವ ಉಳಿಸಲಾಗಲಿಲ್ಲ.

ರಂಗಭೂಮಿಯ ಪಯಣ: ಕನ್ನಡ ರಂಗಭೂಮಿ ನಟ ದುರ್ಗಾ ದಾಸ್, ಅವರ ನಾಲ್ಕನೇ ಪುತ್ರಿಯಾದ ಹನುಮಕ್ಕ ಅವರು ಒಂಬತ್ತನೇ ತರಗತಿಯವರೆಗೆ ಮಾತ್ರ ಒದಿದ್ದರು ಸಹ. ತಂದೆಯ ಪೀಳಿಗೆಗೆ ರಂಗಭೂಮಿಯೊಂದಿಗಿನ ನಂಟು ಕೊನೆಯಾಗಬಾರದು, ಅದನ್ನು ಮುಂದುವರಿಸಿಕೊಂಡು ಏನಾದರೂ ಸಾಧನೆ ಮಾಡಬೇಕೆಂದು ಹೊರಟವೇ ಅವರ ಜೀವಾಳವಾಗಿತ್ತು. ಮನೆ ತೊರೆದು ನೀನಾಸಂಗೆ ಸೇರಿದ್ದು ಹನುಮಕ್ಕ ಅವರ ತಂದೆಗೆ ಇಷ್ಟವಿರಲಿಲ್ಲ, ಹೆಣ್ಣುಮಕ್ಕಳನ್ನು ರಂಗಭೂಮಿಯಿಂದ ದೂರವಿಡುತ್ತಿದ್ದ ಕಾಲದಲ್ಲಿ ಅದರಲ್ಲೇ ಜೀವನ ಕಟ್ಟಿಕೊಳ್ಳಲು ಹೊರಟಿದ್ದ ಅವರು ದಿನಕಳೆದಂತೆ ನನ್ನ ಏಳಿಗೆ ಕಂಡು ಅವರ ತಂದೆಯೂ ಕ್ರಮೇಣ ಒಪ್ಪಿಕೊಂಡಿದ್ದರು. ಅಲ್ಲಿಂದ ನನ್ನ ಪಯಣಕ್ಕೆ ಹೊಸ ತಿರುವು ಶುರುವಾಗಿತ್ತು.

ಮಾರ್ಗದರ್ಶನ: ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ. ಸಿಜಿಕೆ, ಸಿ.ಬಸವಲಿಂಗಯ್ಯ, ಮೇಕಪ್ ನಾಣಿ, ಕೀರ್ತಿನಾಥ ಕುರ್ತಕೋಟಿ, ಯು.ಆರ್.ಅನಂತಮೂರ್ತಿ, ಕೀ.ರಂ.ನಾಗರಾಜ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆದವರು.

ಪ್ರಮುಖ ನಾಟಕಗಳು: ಡಿ. ಹನುಮಕ್ಕ ಅವರು ಅನೇಕ ನಾಟಕಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಪ್ರಮುಖ ನಾಟಕಗಳು: ತುಘಲಕ್, ಅಗ್ನಿ ಮತ್ತು ಮಳೆ, ಬೆರಳ್‌ಗೆ ಕೊರಳ್, ನಾಗಮಂಡಲ, ಚಿರಬಂದೆವಾಡೆ. ಸ್ಮಶಾನ ಕುರುಕ್ಷೇತ್ರ. ಚಾಳೇಶ. ಜೋಕುಮಾರಸ್ವಾಮಿ. ಬೇಲಿ ಮತ್ತು ಹೊಲ.ಶರೀಫ. ಒಡಲಾಳ. ಸೂರ್ಯಶಿಕಾರಿ.

ಹನುಮಕ್ಕ ಹಲವಾರು ಚಲನಚಿತ್ರಗಳಲ್ಲಿ ಸಹ ನಟನೆ ಮಾಡಿದ್ದಾರೆ ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು 2008 ರ ಕವಿತಾ ಲಂಕೇಶ್ ನಿರ್ದೇಶನದ ಚಲನಚಿತ್ರ “ಅವ್ವ

Previous articleಸೈಬರ್ ಕ್ರೈಂನಲ್ಲಿ ಕರ್ನಾಟಕ ನಂಬರ್-1: ಬೆಂಗಳೂರಲ್ಲೇ ಅತಿ ಹೆಚ್ಚು ಅಪರಾಧ
Next articleಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡರ ಮಹತ್ವದ ಘೋಷಣೆ

LEAVE A REPLY

Please enter your comment!
Please enter your name here