ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರಕಾರಿ ಕೆಲಸ: ಶಾಸಕ ಭರವಸೆ

0
15

ಚಿತ್ರದುರ್ಗ: ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ, ಸದ್ಯ ಆರ್ಥಿಕ ಸಂಕಷ್ಟವನ್ನೂ ಅನುಭವಿಸುತ್ತಿದ್ದಾರೆ. ಹೀಗಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ ನೆರವಾಗಲು ಚಳ್ಳಕೆರೆ ಕಾಂಗ್ರೆಸ್‌ ಶಾಸಕ ಟಿ. ರಘುಮೂರ್ತಿ ಮುಂದಾಗಿದ್ದಾರೆ.

ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಈ ಮೂಲಕ ಅವರ ಕುಟುಂಬಕ್ಕೆ ಆರ್ಥಿಕ ಸಹಾಯವಾಗುವುದು ಎಂಬ ಆಲೋಚನೆ ಶಾಸಕ ಟಿ ರಘುಮೂರ್ತಿ ಅವರದ್ದಾಗಿದೆ.

ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಶಾಸಕ ಟಿ ರಘುಮೂರ್ತಿ ಅವರು, ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಅಲ್ಲದೇ 1 ಲಕ್ಷ ರೂಪಾಯಿ ನೆರವು ನೀಡಿ, ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರಕಾರಿ ಕೆಲಸ ನೀಡುವ ಭರವಸೆಯನ್ನು ನೀಡಿದರು.

ನೌಕರಿ ವಿಷಯವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಷಯವನ್ನು ತಿಳಿಸಿ ಚರ್ಚಿಸುವುದಾಗಿಯೂ ಭರವಸೆ ನೀಡಿದ್ದಾರೆ. ಅಲ್ಲದೇ ಈ ವೇಳೆ ಮುರುಘಾಮಠದ ಆಡಳಿತಾಧಿಕಾರಿಗೆ ಕರೆ ಮಾಡಿ ಮಠದ ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ನೀಡಲು ಮನವಿ ಮಾಡಿದ್ದಾರೆ.

ಸಿರಿಗೆರೆ ತರಳಬಾಳು ಮಠದ ಸಂಸ್ಥೆಯಲ್ಲೂ ನೌಕರಿ ಕೊಡಿಸುವ ಪ್ರಯತ್ನ ಮಾಡುವೆ ಇಲ್ಲವೇ ಸರಕಾರಿ ಅನುದಾನಿತ ಸಂಸ್ಥೆಯಲ್ಲಾದರೂ ಕೆಲಸ ಕೊಡಿಸುವುದಾಗಿ ಶಾಸಕ ರಘುಮೂರ್ತಿ ಭರವಸೆಯನ್ನು ನೀಡಿದ್ದಾರೆ.

ಶಾಸಕರೊಂದಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ, ರವಿಕುಮಾರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜ್ ಕೂಡ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Previous articleದುಲೀಪ್ ಟ್ರೋಫಿ: 11 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಕೇಂದ್ರ ವಲಯ!
Next articleಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಬೆಂಕಿಗಾಹುತಿ: 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

LEAVE A REPLY

Please enter your comment!
Please enter your name here