Home Advertisement
Home ಸುದ್ದಿ ರಾಜ್ಯ ಉಪಚುನಾವಣೆ ಹೈಡ್ರಾಮಾ: ಬಾಗಲಕೋಟೆಯಲ್ಲಿ ಟಗರಿನೊಂದಿಗೆ ಬಂದ ಅಭ್ಯರ್ಥಿ; ದಾವಣಗೆರೆಯಲ್ಲಿ ಹಣಕ್ಕಾಗಿ ಮತದಾನ ಬಹಿಷ್ಕಾರ!

ಉಪಚುನಾವಣೆ ಹೈಡ್ರಾಮಾ: ಬಾಗಲಕೋಟೆಯಲ್ಲಿ ಟಗರಿನೊಂದಿಗೆ ಬಂದ ಅಭ್ಯರ್ಥಿ; ದಾವಣಗೆರೆಯಲ್ಲಿ ಹಣಕ್ಕಾಗಿ ಮತದಾನ ಬಹಿಷ್ಕಾರ!

0
51

ರಾಜ್ಯದ ಎರಡು ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಇಂದು ಉಪಚುನಾವಣೆಯ ಮತದಾನ ಅತ್ಯಂತ ಬಿರುಸಿನಿಂದ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದರೂ, ಕೆಲವು ವಿಭಿನ್ನ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ವರದಿಯಾಗಿವೆ.

ಬಾಗಲಕೋಟೆಯಲ್ಲಿಟಗರಿನಗತ್ತು: ಬಾಗಲಕೋಟೆಯ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತದಾನ ಮಾಡಿದ ಶೈಲಿ ಸಾರ್ವಜನಿಕರ ಗಮನ ಸೆಳೆದಿದೆ. ಅವರು ಮತಗಟ್ಟೆಗೆ ಬರುವಾಗ ಬರಿಗೈಲಿ ಬರದೆ, ಕಾಂಗ್ರೆಸ್ ಚಿಹ್ನೆಯಿರುವ ಶಾಲನ್ನು ಹೊದ್ದಿದ್ದ ‘ಟಗರಿನ’ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ. ಅಭ್ಯರ್ಥಿಯ ಈ ವಿಭಿನ್ನ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗಳಿಗೆ ವೇದಿಕೆಯಾಗಿದೆ.

ದಾವಣಗೆರೆಯಲ್ಲಿ ಹಣಕ್ಕಾಗಿ ಹಠ: ಇನ್ನೊಂದೆಡೆ ದಾವಣಗೆರೆಯಲ್ಲಿ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವಂತಹ ಘಟನೆ ನಡೆದಿದೆ. “ನಮಗೆ ಹಣ ಸರಿಯಾಗಿ ಹಂಚಿಕೆಯಾಗಿಲ್ಲ” ಎಂಬ ಕಾರಣ ನೀಡಿ ನಗರದ ಅರಳಿಮರ ವೃತ್ತ ಮತ್ತು ಬೇತೂರು ರಸ್ತೆಗಳಲ್ಲಿ ನೂರಾರು ಮತದಾರರು ಜಮಾವಣೆಗೊಂಡಿದ್ದಾರೆ.

ಹಣ ಸಿಗದ ಹೊರತು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಮತದಾನದಿಂದ ದೂರ ಉಳಿಯುತ್ತಿರುವುದು ಕಂಡುಬಂದಿದೆ. ಇದು ನಾಗರಿಕ ಸಮಾಜಕ್ಕೆ ಆಘಾತಕಾರಿ ಸಂಗತಿಯಾಗಿದೆ.

ಮೊಬೈಲ್ ನಿಷೇಧ: ದಾವಣಗೆರೆ ದಕ್ಷಿಣ ಕ್ಷೇತ್ರದ ಕನಗೊಂಡನಹಳ್ಳಿ ಮತಗಟ್ಟೆ ಸಂಖ್ಯೆ 265ರಲ್ಲಿ ಭದ್ರತಾ ದೃಷ್ಟಿಯಿಂದ ಮೊಬೈಲ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಮತದಾರರು ಶಿಸ್ತಿನಿಂದ ತಮ್ಮ ಫೋನ್‌ಗಳನ್ನು ಹೊರಗಡೆ ಟೇಬಲ್ ಮೇಲೆ ಇಟ್ಟು ಬಂದು ಮತ ಚಲಾಯಿಸುತ್ತಿರುವುದು ಕಂಡುಬಂತು.

ಒಟ್ಟಾರೆಯಾಗಿ ಒಂದು ಕಡೆ ಅಭ್ಯರ್ಥಿಗಳ ಪ್ರದರ್ಶನವಾದರೆ, ಮತ್ತೊಂದು ಕಡೆ ಹಣಕ್ಕಾಗಿ ಮತ ಮಾರಿಕೊಳ್ಳುವ ಹಠ ಕಂಡುಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಸದ್ಯದ ಕುತೂಹಲ.