ಕೆಲವೊಮ್ಮೆ ಟೀಕೆಗಳು ನಮ್ಮ ಸಂಕಲ್ಪವನ್ನ ಇನ್ನೂ ಗಟ್ಟಿಗೊಳಿಸುತ್ತವೆ : ಪ್ರತಾಪ್​ ಸಿಂಹ..!

0
32

ಮೈಸೂರು: ಮಳೆ ನೀರು ನಿಂತ ಪರಿಣಾಮ ಭಾರೀ ಟೀಕೆಗೆ ಗುರಿಯಾಗಿದ್ದ ಮೈಸೂರು-ಬೆಂಗಳೂರು ಹೆದ್ದಾರಿಯ 23 ಕಿಮೀ ಮಾರ್ಗ ಇವತ್ತು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಖುದ್ದು ಮೈಸೂರು ಸಂಸದ ಪ್ರತಾಪ್​ ಸಿಂಹ ಈ ವಿಚಾರವನ್ನು ತಮ್ಮ ಟ್ವಿಟ್​ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಟೀಕೆಗಳು ನಮ್ಮ ಸಂಕಲ್ಪವನ್ನು ಗಟ್ಟಿಗೊಳಿಸುತ್ತವೆ. ರಾಮನಗರ-ಚನ್ನಪಟ್ಟಣ ನಡುವೆ 23 ಕಿಮೀ ರಸ್ತೆ ನಿಮ್ಮ ಸಂಚಾರಕ್ಕೆ ತೆರವು ಮಾಡುತ್ತಿದ್ದೇವೆ ಎಂದು ಪ್ರತಾಪ್​ ಸಿಂಹ ಬರೆದುಕೊಂಡಿದ್ದಾರೆ. ಸ್ವತಃ ನೀವೇ ಬಂದು ರಸ್ತೆ ನೋಡಿ ಎಂದು ಹೇಳಿದ್ದಾರೆ. ರಸ್ತೆ ಗುಣಮಟ್ಟದ ಬಗ್ಗೆ ಕೆಲವರು ಟೀಕೆ ಮಾಡಿದ್ದರು.

Previous articleಸೆ.2 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ..!ಪ್ರಧಾನಿ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಭಾರೀ ಸಿದ್ಧತೆ
Next articleಮುರುಘಾ ಶ್ರೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ