IPL: ಪಂಜಾಬ್ vs ಡೆಲ್ಲಿ ಪಂದ್ಯ ಅರ್ಧಕ್ಕೆ ರದ್ದು

ಧರ್ಮಶಾಲಾ: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದ್ದ ಕ್ರಿಕೆಟ್‌ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ಸೇನೆ ಆದೇಶದ ಹಿನ್ನೆಲೆಯಲ್ಲಿ ಸ್ಟೇಡಿಯಂ ಲೈಟ್‌ ಬಂದ್‌ ಮಾಡಿ ಬ್ಲಾಕ್‌ ಔಟ್‌ ಮಾಡಲಾಗಿದ್ದು, ಜನರಿಗೆ ತೆರಳಲು ಸೂಚಿಸಿದೆ.
ಇದಕ್ಕೂ ಮುನ್ನ ಮಳೆಯಿಂದ ಪಂದ್ಯದಲ್ಲಿ ಟಾಸ್ ವಿಳಂಬವಾಗಿದ್ದು, ಬಳಿಕ ಟಾಸ್‌ ಗೆದ್ದು ಮೊದಲ ಬ್ಯಾಟ್‌ ಮಾಡುತ್ತಿದ್ದ ಪಂಜಾಬ್ ಕಿಂಗ್ಸ್ 10.1 ಓವರ್‌ಗಳಲ್ಲಿ 122/1 ರನ್‌ ಗಳಿಸಿತ್ತು. ಪಂಜಾಬ್‌ ಪರ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 34 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು.