ಢಾಕಾ: ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಅರಾಜಕತೆಯಿಂದಾಗಿ ಭಯಭೀತರಾಗಿರುವ ಹಿಂದೂಗಳು ಈಗ ಭಾರತಕ್ಕೆ ಬರಲು ಗಡಿ ತೆರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕಳಕಳಿಯ ಮನವಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಾಂಗ್ಲಾದಲ್ಲಿ ನಡೆದಿರುವ ದೀಪುಚಂದ್ರ ದಾಸ್ ಹಾಗೂ ಅಮೃತ ಮಂಡಲ್ ಹತ್ಯೆಗಳಿಂದ ಅಲ್ಲಿನ ಹಿಂದೂ ಸಮುದಾಯ ಭಯಗೊಂಡಿದ್ದು ಬಾಂಗ್ಲಾದ ಮೂಲಭೂತವಾದಿಗಳ ದಾಳಿಯಿಂದ ತಪ್ಪಿಸಿ ಕೊಳ್ಳಲು ಭಾರತಕ್ಕೆ ಬರುವುದೊಂದೇ ದಾರಿ ಎಂದು ಭಾವಿಸಿದೆ. ರಂಗಪುರ, ಚಿತ್ತಗಾಂಗ್ ಹಾಗೂ ಮೈಮುನಸಿಂಗ್‌ನ ಹಿಂದೂಗಳನ್ನು ಪತ್ರಕರ್ತರೊಬ್ಬರು ಮಾತಾಡಿಸಿದಾಗ ಅವರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಜನವರಿ ಮೊದಲ ವಾರದಲ್ಲೇ ನಾಯಕತ್ವ ಕ್ರಾಂತಿಗೆ ಮುಹೂರ್ತ ನಿಗದಿ?
ಹಿಂದೂಗಳೆಂಬ ಏಕೈಕ ಕಾರಣದಿಂದ ನಾವು ನಿರಂತರ ಅವಮಾನ ಎದುರಿಸುತ್ತಿದ್ದೇವೆ. ಪದೇಪದೇ ನಡೆಯುತ್ತಿರುವ ಕಿರುಕುಳದಿಂದ ಬೇಸತ್ತಿದ್ದೇವೆ. ಈ ಬಗ್ಗೆ ಯಾರಲ್ಲೂ ಹೇಳಿಕೊಳ್ಳದ ಸ್ಥಿತಿಯಲ್ಲಿದ್ದೇವೆ. ರಸ್ತೆಯಲ್ಲಿ ನಡೆಯುವಾಗ ಕೇಳಿಬರುವ ಅಣಕಗಳು ಸದ್ಯದಲ್ಲೇ ಶೀಘ್ರದಲ್ಲೇ ಗುಂಪು ಹತ್ಯೆಗಳಾಗಿ ಮಾರ್ಪಡುವ ಅಪಾಯಗಳಿವೆ. ನಾವು ಇಲ್ಲಿ ಭಯಗೊಂಡಿದ್ದೇವೆ. ಬೇರೆ ಎಲ್ಲಿಯೂ ಹೋಗಲು ನಮಗೆ ದಾರಿ ಇಲ್ಲ. ಭಯದಲ್ಲೇ ಜೀವನ ನಡೆಸುವಂತಾಗಿದೆ ಎಂದು ರಂಗಪುರದ ನಿವಾಸಿಯೊಬ್ಬರು ಹೇಳಿದ್ದಾರೆ.









