Home Advertisement
Home ಸುದ್ದಿ ವಿದೇಶ ಟ್ರಂಪ್‌ಗೆ ಸುಂಕ ವಿಧಿಸುವ ಅಧಿಕಾರವಿಲ್ಲ: ಅಮೆರಿಕ ಸುಪ್ರೀಂ ಕೋರ್ಟ್

ಟ್ರಂಪ್‌ಗೆ ಸುಂಕ ವಿಧಿಸುವ ಅಧಿಕಾರವಿಲ್ಲ: ಅಮೆರಿಕ ಸುಪ್ರೀಂ ಕೋರ್ಟ್

0
27

ವಾಷಿಂಗ್ಟನ್: ಸರ್ವಾಧಿಕಾರದಿಂದ, ಕ್ಯಾಬಿನೆಟ್​​ ಒಪ್ಪಿಗೆಯಿಲ್ಲದೆ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎಂದು ಹೇಳುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್​ ಡೊನಾಲ್ಡ್‌ ಟ್ರಂಪ್​ಗೆ ದೊಡ್ಡ ಶಾಕ್ ನೀಡಿದೆ.

ಏಪ್ರಿಲ್ 2025ರ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತರ ದೇಶಗಳ ಮೇಲೆ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ಆ್ಯಕ್ಟ್ ಮೂಲಕ ಹೇರಿದ್ದ ತೆರಿಗೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಇದನ್ನೂ ಓದಿ: ಹಳೇ ಹಂಡೆಯಲ್ಲಿ ಚಾಕಲೇಟ್‌ ಇಟ್ಟು ನಿಧಿ ಎಂದಿದ್ದ ಮೌಲ್ವಿ ಅರೆಸ್ಟ್‌

ಇದರ ಬೆನ್ನಲ್ಲೇ ಈಗ ಜಗತ್ತಿನ ಎಲ್ಲ ದೇಶಗಳ ಮೇಲೆ ಟ್ರಂಪ್ ವಿಧಿಸಿದ್ದ 10% ಬೇಸ್ ತೆರಿಗೆ ರದ್ದಾಗಲಿದ್ದು, ಇದು ಭಾರತಕ್ಕೂ ಅನ್ವಯವಾಗಲಿದೆ. ಕಾಂಗ್ರೆಸ್ ಅನುಮೋದನೆ ಇಲ್ಲದೆ ನೇರವಾಗಿ ಐಇಇಪಿಎ ಅಡಿ ತೆರಿಗೆ ಹೇರುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ ಎಂದು 9 ಸದಸ್ಯರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಟ್ರಂಪ್ ಅವರ ತೆರಿಗೆ ನೀತಿ ಕಾನೂನು ಬಾಹಿರವಾಗಿದೆ ಎಂದು ಕೋರ್ಟ್‌ ಹೇಳಿದೆ. ಈ ಮೂಲಕ ಟ್ರಂಪ್ ಅವರ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ 6-3 ಅಂತರದಿಂದ ರದ್ದುಗೊಳಿಸಿದೆ.

Previous articleನಕಲು ತಡೆದ ಶಿಕ್ಷಕನ ಮೇಲೆ ವಿದ್ಯಾರ್ಥಿಯಿಂದ ಹಲ್ಲೆ
Next articleAI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಯುವ ಕಾಂಗ್ರೆಸಿಗರ ಪ್ರತಿಭಟನೆ