ವೆನೆಜುವೆಲಾ ಆಪರೇಷನ್ ಬಳಿಕ ಭಾರತದ ಮೇಲೆ ಮತ್ತಷ್ಟು ಸುಂಕದ ಸುಳಿವು ನೀಡಿದ ಟ್ರಂಪ್

0
9

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧ ಟ್ಯಾರಿಫ್ ಬೆದರಿಕೆಯನ್ನು ಮತ್ತೊಮ್ಮೆ ಗಟ್ಟಿಗೊಳಿಸಿದ್ದು, ರಷ್ಯನ್ ತೈಲ ಆಮದು ವಿಚಾರದಲ್ಲಿ ಭಾರತ ತನ್ನ ನಿಲುವು ಬದಲಿಸದಿದ್ದರೆ ಇನ್ನೂ ಹೆಚ್ಚಿನ ಆಮದು ಸುಂಕ (US Tariffs) ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಷ್ಯನ್ ತೈಲವೇ ಅಸಮಾಧಾನದ ಮೂಲ: ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ರಷ್ಯಾದ ಆರ್ಥಿಕತೆಯ ಪ್ರಮುಖ ಆಧಾರವಾಗಿರುವ ತೈಲ ವ್ಯಾಪಾರವನ್ನು ದುರ್ಬಲಗೊಳಿಸುವ ಉದ್ದೇಶದಿಂದ, ರಷ್ಯನ್ ತೈಲವನ್ನು ಖರೀದಿ ಮಾಡಬಾರದೆಂದು ಅಮೆರಿಕ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡ ಹೇರುತ್ತಿದೆ.

ಇದನ್ನೂ ಓದಿ:  ಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ

ಆದರೆ ಕಡಿಮೆ ದರದಲ್ಲಿ ಲಭ್ಯವಾಗುವ ರಷ್ಯನ್ ತೈಲವನ್ನು ಭಾರತ ತನ್ನ ಇಂಧನ ಅವಶ್ಯಕತೆಗಾಗಿ ಬಳಸಿಕೊಳ್ಳುತ್ತಿದ್ದು, ಇದರಿಂದ ಅಮೆರಿಕ ಆಡಳಿತ ಅಸಮಾಧಾನಗೊಂಡಿದೆ. ಪ್ರಸ್ತುತ ಚೀನಾ ಮತ್ತು ಭಾರತವು ರಷ್ಯಾದಿಂದ ಅತಿಹೆಚ್ಚು ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವ ರಾಷ್ಟ್ರಗಳಾಗಿವೆ.

ಈಗಾಗಲೇ ಶೇ. 50ರಷ್ಟು ಟ್ಯಾರಿಫ್: ಡೊನಾಲ್ಡ್ ಟ್ರಂಪ್ ಕಳೆದ ವರ್ಷ ಅಧಿಕಾರಕ್ಕೆ ಬಂದ ಬಳಿಕ ಹಲವು ದೇಶಗಳ ಮೇಲೆ ಪ್ರತಿಸುಂಕ (Reciprocal Tariff) ವಿಧಿಸಿದ್ದರು. ಮೊದಲ ಹಂತದಲ್ಲಿ ಭಾರತದ ಮೇಲೆ ಶೇ. 25ರಷ್ಟು ಟ್ಯಾರಿಫ್ ವಿಧಿಸಲಾಗಿತ್ತು. ನಂತರ, ರಷ್ಯನ್ ತೈಲ ಖರೀದಿಯನ್ನು ಮುಂದುವರಿಸುತ್ತಿರುವುದನ್ನು ಕಾರಣವನ್ನಾಗಿ ಮಾಡಿಕೊಂಡು ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸಲಾಯಿತು. ಇದರಿಂದ ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ಒಟ್ಟು ಟ್ಯಾರಿಫ್ ಶೇ. 50ರಷ್ಟಿಗೆ ಏರಿಕೆಯಾಗಿದೆ.

ಇದನ್ನೂ ಓದಿ:  ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ಇನ್ನೂ ಕಠಿಣ ಕ್ರಮದ ಎಚ್ಚರಿಕೆ: ಈಗಾಗಲೇ ಶೇ. 50ರಷ್ಟು ಟ್ಯಾರಿಫ್ ಜಾರಿಯಲ್ಲಿದ್ದರೂ, ಭಾರತ ತನ್ನ ತೈಲ ಆಮದು ನೀತಿಯನ್ನು ಬದಲಿಸದಿದ್ದರೆ ಇನ್ನೂ ಹೆಚ್ಚಿನ ಸುಂಕ ವಿಧಿಸುವುದಾಗಿ ಟ್ರಂಪ್ ಬಹಿರಂಗವಾಗಿ ಎಚ್ಚರಿಕೆ ನೀಡಿರುವುದು, ಭಾರತ–ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ.

ರಷ್ಯನ್ ತೈಲ ಖರೀದಿ ವಿಚಾರದಲ್ಲಿ ಭಾರತ ತನ್ನ ಇಂಧನ ಭದ್ರತೆ ಮತ್ತು ಆರ್ಥಿಕ ಅಗತ್ಯಗಳನ್ನು ಮುಂದಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಿರುವಾಗ, ಅಮೆರಿಕದ ಈ ಬೆದರಿಕೆ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಗಮನಾರ್ಹ ವಿಷಯವಾಗಿದೆ.

Previous articleಹುಲಿ ಗಣತಿ ಹಿನ್ನೆಲೆ: ಗಡಾಯಿಕಲ್ಲು ಸೇರಿದಂತೆ ಫಾಲ್ಸ್ ಬಂದ್