ಪಾಕ್‌ನಿಂದ ಪಾಕ್ ಮೇಲೇ ಸರ್ಜಿಕಲ್ ಸ್ಟ್ರೇಕ್: 30 ಬಲಿ

0
3

ಇಸ್ಲಾಮಾಬಾದ್: ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ಖೈಬರ್ ಫಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 30 ಮಂದಿ ಹತ್ಯೆಗೀಡಾಗಿದ್ದಾರೆ. ತ್ರೆಹೀಕ್ ಎ ತಾಲಿಬಾನ್(ಟಿಟಿಪಿ)ನ ಸ್ಥಳೀಯ ಕಮಾಂಡರುಗಳಾದ ಅಮಾನ್ ಗುಲ್ ಹಾಗೂ ಮಸೂದ್ ಖಾನ್ ಅವರನ್ನು ಗುರಿಯಾಗಿರಿಸಿ ಈ ದಾಳಿ ನಡೆದಿದ್ದರೂ ಸಾವಿಗೀಡಾದವರೆಲ್ಲರೂ ನಾಗರಿಕರೆಂದು ಹೇಳಲಾಗುತ್ತಿದೆ.

ಪಾಕಿಸ್ತಾನ ವಾಯುಪಡೆಯು ಚೀನಾ ನಿರ್ಮಿತ ಜೆಎಫ್-17 ಥಂಡರ್ ಜೆಟ್‌ಗಳನ್ನು ಬಳಸಿ ಭಾನುವಾರ ಬೆಳಗಿನ ಜಾವ 2 ಗಂಟೆ ವೇಳೆಗೆ ತಿರಾಹ್ ಕಣಿವೆ ಪ್ರದೇಶದಲ್ಲಿ ಎಂಟು ಎಲ್‌ಎಸ್-6 ಬಾಂಬ್‌ಗಳನ್ನು ಬೀಳಿಸಿರುವುದರಿಂದ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಹಲವಾರು ಕುಟುಂಬಗಳು ಗಾಢ ನಿದ್ರೆಯಲ್ಲಿದ್ದಾಗ ಬಾಂಬ್‌ಗಳನ್ನು ಬೀಳಿಸಲಾಗಿದೆ.

ಮಾಧ್ಯಮಗಳ ವರದಿ ಪ್ರಕಾರ, ಟಿಟಿಪಿ ನಿರ್ವಹಿಸುವ ಬಾಂಬ್ ಘಟಕದ ಮೇಲೆ ದಾಳಿ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಈ ಉಗ್ರರ ಗುಂಪಿಗೆ ಆ ದೇಶದ ಸರ್ಕಾರ ಬೆಂಬಲ ವನ್ನೂ ನೀಡುತ್ತಿದೆ. ಆದರೆ ಅಫ್ಘಾನಿಸ್ತಾನ ಸರ್ಕಾರ ಪಾಕಿಸ್ತಾನ ಆರೋಪವನ್ನು ತಳ್ಳಿಹಾಕಿದೆ.

ಟಿಟಿಪಿಯ ಕಮಾಂಡರ್‌ಗಳಾದ ಅಮನ್ ಗುಲ್ ಹಾಗೂ ಮಸೂದ್ ಖಾನ್ ಈ ಗ್ರಾಮದಲ್ಲಿ ಬಾಂಬ್ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ಅದರಲ್ಲಿ ಕಾರ್ಯನಿರ್ವಹಿಸಲು ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದಾರೆ ಎಂದು ಖೈಬರ್ ಪೊಲೀಸರು ತಿಳಿಸಿದ್ದಾರೆ.

ದಾಳಿ ನಿರಾಕರಿಸಿದ ಪಾಕ್ ಸೇನೆ: ಅದೇನಿದ್ದರೂ ಈ ವೈಮಾನಿಕ ದಾಳಿಯಲ್ಲಿ ತನ್ನದೇನೂ ಪಾತ್ರ ಇಲ್ಲ ಎಂದು ಪಾಕಿಸ್ತಾನ ವಾಯುಪಡೆ ಸಮರ್ಥಿಸಿಕೊಂಡಿದೆ. ಮೆತ್ರಾ ದಾರದ ಮನೆ ಯೊಳಗೆ ಖಾವರಿಜ್ ಉಗ್ರಗಾಮಿಗಳು ಅವಿತಿರಿಸಿದ್ದ ಸ್ಫೋಟಕ ಸಾಮಗ್ರಿಗಳು ಸ್ಫೋಟಿಸಿರುವುದರಿಂದ ಈ ದುರಂತ ಸಂಭವಿಸಿದೆ ಎಂದೂ ಹೇಳಿಕೊಂಡಿದೆ.

ಏಕೆ ನಡೆಯಿತು ದಾಳಿ?
ಖೈಬರ್ ಫಖ್ತುಂಖ್ವಾ ತೆಹ್ರೀಕ್ ಎ ತಾಲೀಬಾನ್ ಭಯೋದ್ಪಾದಕರ ಬಲವಾದ ನೆಲೆಯಾಗಿದೆ
ಟಿಟಿಪಿ ಉಗ್ರರ ನೆಲೆಗಳನ್ನು ಗುರಿಯನ್ನಾಗಿಸಿ ಪಾಕಿಸ್ತಾನ ಕೆಲವು ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದೆ.
ಟಿಟಿಪಿಯ ಕಮಾಂಡರ್‌ಗಳು ಈಗ ದಾಳಿ ನಡೆಸಿದ ಪ್ರದೇಶದಲ್ಲಿ ಬಾಂಬ್ ತಯಾರಿಕಾ ಘಟಕ ಸ್ಥಾಪಿಸಿದ್ದಾರೆನ್ನುವ ಆರೋಪ ಇತ್ತು.

Previous articleತಾಲೂಕು ಕಛೇರಿಯಲ್ಲಿ ಸಿಗಲಿದ್ದಾರೆ ಜಿಲ್ಲಾಧಿಕಾರಿ, ಸರ್ಕಾರದ ಹೊಸ ಆದೇಶ
Next articleನವಜಾತ ಶಿಶು ಮರಣ ಕರ್ನಾಟಕದಲ್ಲಿ 1000ಕ್ಕೆ 12

LEAVE A REPLY

Please enter your comment!
Please enter your name here