ನ್ಯೂಯಾರ್ಕ್ ಅಲ್ಬನಿಯಲ್ಲಿ ಪ್ರಧಾನಿ ಮೋದಿ ಜನ್ಮದಿನ ಆಚರಣೆ

0
52

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಹಿಂದೂ ದೇವಾಲಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನವನ್ನು ಸಾಮೂಹಿಕವಾಗಿ ದೇವರಿಗೆ ಅರ್ಚನೆ, ಪ್ರಾರ್ಥನೆ, ಪೂಜೆ ಮಾಡುವುದರ ಜೊತೆಗೆ ಮೋದಿಯವರ ಹುಟ್ಟುಹಬ್ಬದ ವಿಶೇಷ ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು.

ಸ್ಥಳೀಯ ಮುಖಂಡರಾದ ಬೆಂಕಿ ಬಸಣ್ಣ, ಸುರೇಶ್ ಬಾಟೆ, ಈರಣ್ಣ, ಶ್ರೀಕುಮಾರ್ ಮತ್ತು ಪ್ರದೀಪ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎರಡು ವರ್ಷದ ಮಗುವಿನಿಂದ 85 ವರ್ಷದ ಹಿರಿಯರು ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿಗೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಕಿ ಬಸಣ್ಣನವರು, “ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿರುವುದು ನಮ್ಮೆಲ್ಲರ ಪುಣ್ಯ. 2014ಕ್ಕೂ ಮೊದಲು ನಾವು ಪಾಕಿಸ್ತಾನವನ್ನು ನಮ್ಮ ಸಮಾನ ಬಲವುಳ್ಳ ವೈರಿಯಾಗಿ ಮತ್ತು ಚೀನಾ ದೇಶವನ್ನು ನಮಗಿಂತ ಅತ್ಯಂತ ಬಲಿಷ್ಠವಾದ ದೇಶವೆಂದು ಪರಿಗಣಿಸುತ್ತಿದ್ದೆವು” ಎಂದರು.

“ಮೋದಿ ಪ್ರಧಾನಿಯಾಗಿ ಕೇವಲ ಹತ್ತು ವರ್ಷಗಳಲ್ಲಿ ನಾವು ಪಾಕಿಸ್ತಾನವನ್ನು ನಮಗಿಂತ ಅತ್ಯಂತ ದುರ್ಬಲ ದೇಶವನ್ನಾಗಿ ಮತ್ತು ಚೀನಾವನ್ನು ನಮ್ಮ ಸಮ ಬಲದ ದೇಶವಾಗಿ ನೋಡುತ್ತಿದ್ದೇವೆ. ಮೋದಿ ಅವರು ಇನ್ನೂ ಹತ್ತು ಹದಿನೈದು ವರ್ಷ ಸಂಪೂರ್ಣ ಬಹುಮತದೊಂದಿಗೆ ಪ್ರಧಾನಿಯಾದರೆ ಭಾರತವು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ದೇಶವಾಗಿ ಬೆಳೆದು ʼಸೂಪರ್ ಪವರ್ʼ ಆಗುವುದರಲ್ಲಿ ಸಂದೇಹವೇ ಇಲ್ಲ” ಎಂದರು.

Previous articleವಿಜಯಪುರ: ಸಿಂದಗಿ ವ್ಯಾಪ್ತಿಯಲ್ಲಿ ಹಲವು ಬಾರಿ ಭೂಕಂಪನ
Next articleಬೆಳಗಾವಿ: ಹೆಲಿಕಾಪ್ಟರ್ ​ಖರೀದಿಸಿದ ಸಚಿವ ಸತೀಶ್ ಜಾರಕಿಹೊಳಿ

LEAVE A REPLY

Please enter your comment!
Please enter your name here