Home Advertisement
Home ಸುದ್ದಿ ವಿದೇಶ ಇರಾಕನಲ್ಲಿ ವಿಮಾನಪತನ: ಅಮೆರಿಕದ 6 ಜನ ಸಾವು

ಇರಾಕನಲ್ಲಿ ವಿಮಾನಪತನ: ಅಮೆರಿಕದ 6 ಜನ ಸಾವು

0
3

ಟೆಹ್ರಾನ್: ಅಮೆರಿಕದ ಫೈಟರ್ ಜೆಟ್‌ಗಳಿಗೆ ಇಂಧನ ಪೂರೈಸುತ್ತಿದ್ದ ಕೆಸಿ-135 ವಿಮಾನ ಇರಾಕ್‌ನಲ್ಲಿ ಪತನಗೊಂಡಿದ್ದು, ನಾಲ್ಕು ಜನ ಮೃತಪಟ್ಟಿದ್ದಾರೆ. ಜತೆಗೆ ಇಬ್ಬರಿಗೆ ಗಂಭೀರ ಗಾಯಗಳೂ ಆಗಿವೆ.

ಪಶ್ಚಿಮ ಇರಾಕ್‌ನಲ್ಲಿ ಅಪಘಾತಕ್ಕೀಡಾದ ಅಮೆರಿಕ ವಾಯುಪಡೆಯ ಈ ವಿಮಾನದಲ್ಲಿದ್ದ ಆರು ಜನ ಸಿಬ್ಬಂದಿ ಇದ್ದರು. ಈ ಪೈಕಿ ನಾಲ್ಕು ಜನ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೇಂದ್ರ ಕಮಾಂಡ್ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

ಇಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ವಿಮಾನ ಏಕೆ ಅಪಘಾತಕ್ಕೆ ಒಳಗಾಯಿತು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇತರ ವಿಮಾನಗಳಿಗೆ ಆಕಾಶದಲ್ಲಿ ಇಂಧನ ತುಂಬಲು ಬಳಸಲಾಗುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ಇನ್ನೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎರಡನೇ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಇರಾನ್ ಬೆಂಬಲಿತ ಸಶಸ್ತ್ರ ಬಣಗಳ ಒಂದು ಗುಂಪು ವಿಮಾನವನ್ನು ಕ್ಷಿಪಣಿಯಿಂದ ಹೊಡೆದುರುಳಿಸಿದೆ ಎಂದು ಇರಾನ್ ರಾಜ್ಯ ಮಾಧ್ಯಮ ಹೇಳಿಕೊಂಡಿದೆ.