Home Advertisement
Home ಸುದ್ದಿ ವಿದೇಶ ಆರ್ಟೆಮಿಸ್-II : 50 ವರ್ಷಗಳ ಬಳಿಕ ಮಾನವ ಚಂದ್ರನತ್ತ ಪ್ರಯಾಣ

ಆರ್ಟೆಮಿಸ್-II : 50 ವರ್ಷಗಳ ಬಳಿಕ ಮಾನವ ಚಂದ್ರನತ್ತ ಪ್ರಯಾಣ

0
80

ಫ್ಲೋರಿಡಾ/ನವದೆಹಲಿ : NASA ತನ್ನ ಮಹತ್ವಾಕಾಂಕ್ಷಿ Artemis II ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಮಾನವ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಅಮೆರಿಕದ Kennedy Space Center ನಿಂದ ಬೃಹತ್ Space Launch System (SLS) ರಾಕೆಟ್ ಭಾರತೀಯ ಕಾಲಮಾನ ಪ್ರಕಾರ ನಸುಕಿನ ಜಾವ 3:54ಕ್ಕೆ ಉಡಾವಣೆಯಾಗಿ, ನಾಲ್ವರು ಗಗನಯಾತ್ರಿಗಳನ್ನು ಚಂದ್ರನತ್ತ ಕೊಂಡೊಯ್ದಿದೆ.

50 ವರ್ಷಗಳ ಬಳಿಕ ಮಾನವ ಚಂದ್ರಯಾನ: 1972ರಲ್ಲಿ ನಡೆದ Apollo 17 ನಂತರ ಮೊದಲ ಬಾರಿಗೆ ಮಾನವರು ಚಂದ್ರನ ಕಕ್ಷೆಯತ್ತ ಪ್ರಯಾಣಿಸುತ್ತಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ. ಈ ಮಿಷನ್ ಭವಿಷ್ಯದ ಚಂದ್ರನ ಮೇಲಿನ ಮಾನವ ಇಳಿಯುವಿಕೆಗೆ ಮಹತ್ವದ ಹಂತವೆಂದು ನಾಸಾ ತಿಳಿಸಿದೆ.

ಉಡಾವಣೆಯ ಬಳಿಕ Orion spacecraft ಸುರಕ್ಷಿತವಾಗಿ ಭೂಮಿಯ ಕಕ್ಷೆಗೆ ಪ್ರವೇಶಿಸಿದೆ. ಸುಮಾರು 10 ದಿನಗಳ ಕಾಲ ನಡೆಯಲಿರುವ ಈ ಮಿಷನ್‌ನಲ್ಲಿ ಗಗನಯಾತ್ರಿಗಳು ಚಂದ್ರನಿಗೆ ಸುಮಾರು 7,500 ಕಿಲೋಮೀಟರ್‌ಗಳಷ್ಟು ಹತ್ತಿರ ಪ್ರಯಾಣಿಸಲಿದ್ದಾರೆ.

ಈ ಮಿಷನ್‌ನಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್ ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸೆನ್ ಭಾಗವಹಿಸಿದ್ದಾರೆ. ಉಡಾವಣೆಗೆ ಮುನ್ನ ಹ್ಯಾನ್ಸೆನ್ “ನಾವು ಎಲ್ಲಾ ಮಾನವಕುಲಕ್ಕಾಗಿ ಈ ಪ್ರಯಾಣ ಮಾಡುತ್ತಿದ್ದೇವೆ” ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.

ಈ ಮಿಷನ್‌ನ ಪ್ರಮುಖ ಉದ್ದೇಶಗಳಲ್ಲಿ ಚಂದ್ರನ ಸುತ್ತ ಮಾನವ ಸಹಿತ ಹಾರಾಟ, ಬಾಹ್ಯಾಕಾಶ ವ್ಯವಸ್ಥೆಗಳ ಪರೀಕ್ಷೆ ಮತ್ತು ಮುಂದಿನ Artemis III ಮಿಷನ್‌ಗೆ ಸಿದ್ಧತೆ ಒಳಗೊಂಡಿದೆ. ಉಡಾವಣೆಯ ಸಂದರ್ಭದಲ್ಲಿ ಸಾವಿರಾರು ಜನರು ಸ್ಥಳದಲ್ಲೇ ವೀಕ್ಷಿಸಿದ್ದು, ಈ ಘಟನೆ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಆಸಕ್ತರ ಗಮನ ಸೆಳೆದಿದೆ.

ಆರ್ಟೆಮಿಸ್-II ಮಿಷನ್ ಯಶಸ್ವಿಯಾಗಿ ಪ್ರಾರಂಭಗೊಂಡಿದ್ದು, ಮುಂದಿನ ಹಂತವಾಗಿ ಚಂದ್ರನ ಸುತ್ತ ಸಂಚರಣೆ ಕಾರ್ಯಾಚರಣೆ ನಡೆಯಲಿದೆ.